Saturday, June 6, 2026
Homeಕರಾವಳಿಬೆಳ್ತಂಗಡಿ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಪ್ರಕರಣ; ಗಂಭೀರ ಗಾಯಗೊಂಡಿದ್ದ ಕೆ ಎಸ್ ಆರ್...

ಬೆಳ್ತಂಗಡಿ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಪ್ರಕರಣ; ಗಂಭೀರ ಗಾಯಗೊಂಡಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಸಾವು

- Advertisement -
- Advertisement -

ಬೆಳ್ತಂಗಡಿ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಸಾವನ್ನಪ್ಪಿದ್ದಾರೆ.

ಮೇ.18ರಂದು ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಸೇತುವೆ ಸಮೀಪ ಕುಡಾಲ ಎಂಬಲ್ಲಿಯ ರಸ್ತೆ ಬಳಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಅಶೋಕ್ ಮೃತಪಟ್ಟಿದ್ದಾರೆ. ಅಶೋಕ್ ಎಂಬುವವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಗೋಳಿತೊಟ್ಟು ಪೆರಣ ನಿವಾಸಿಯಾಗಿರುವ ಅಶೋಕ್ ಅವರು ಕೆ ಎಸ್ ಆರ್ ಟಿ ಸಿ ಬಸ್ ಚಾಲಕರಾಗಿದ್ದರು.ಅವರು ಕರ್ತವ್ಯ ಮುಗಿಸಿ ಧರ್ಮಸ್ಥಳದಿಂದ ಉಪ್ಪಾರಪಳಿಕೆ ಮಾರ್ಗವಾಗಿ ಪೆರಣದ ಮನೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿತ್ತು. ಉಪ್ಪಿನಂಗಡಿಯಿಂದ ಉಪ್ಪಾರಪಳಿಕೆಯ ಕಡೆಗೆ ಬರುತ್ತಿದ್ದ ಉಪ್ಪಿನಂಗಡಿ ಮೂಲದ ಉದ್ಯಮಿಯೊಬ್ಬರ ಕಾರು ಡಿಕ್ಕಿಯಾಗಿತ್ತು. ಪರಿಣಾಮ ಗಂಭೀರ ಗಾಯಗೊಂಡಿದ್ದ ಅಶೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!