Thursday, July 23, 2026
Homeಕರಾವಳಿಬೆಳ್ತಂಗಡಿ; ಸೂಪರ್ ಮಾರ್ಕೆಟ್ ನಲ್ಲಿ ಅಗ್ನಿ ಅನಾಹುತ, ಲಕ್ಷಾಂತರ ರೂಪಾಯಿ ನಷ್ಟ

ಬೆಳ್ತಂಗಡಿ; ಸೂಪರ್ ಮಾರ್ಕೆಟ್ ನಲ್ಲಿ ಅಗ್ನಿ ಅನಾಹುತ, ಲಕ್ಷಾಂತರ ರೂಪಾಯಿ ನಷ್ಟ

- Advertisement -
- Advertisement -

ಬೆಳ್ತಂಗಡಿ; ಸೂಪರ್ ಮಾರ್ಕೆಟ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಸೋಮಂತಡ್ಕದ ದಿಡುಪೆ ಎಂಬಲ್ಲಿ ನಡೆದಿದೆ.
ಬಿ ಎಂ ಹಂಝ ಎಂಬವರ ಮಾಲೀತ್ವದ ಸೂಪರ್ ಮಾರ್ಕೆಟ್‌‌ನಲ್ಲಿ ಇಂದು ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಪತ್ರಿಕಾ ವಿತರಣೆ ಮಾಡುವವರು ಇದನ್ನು ಗಮನಿಸಿದ್ದು ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ
ಸ್ಥಳೀಯರು ಹಾಗೂ ಅಗ್ನಿಶಾಮಕದ ಸಿಬ್ಬಂದಿ ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಅನಾಹುತದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!