Tuesday, June 9, 2026
Homeತಾಜಾ ಸುದ್ದಿಡಾ.ಅಲೋಕ್ ಮೋಹನ್ ರನ್ನು ಕರ್ನಾಟಕದ ಉಸ್ತುವಾರಿ ಡಿಜಿ ಮತ್ತು ಐಜಿಪಿಯಾಗಿ ನೇಮಿಸಿದ ರಾಜ್ಯ ಸರ್ಕಾರ

ಡಾ.ಅಲೋಕ್ ಮೋಹನ್ ರನ್ನು ಕರ್ನಾಟಕದ ಉಸ್ತುವಾರಿ ಡಿಜಿ ಮತ್ತು ಐಜಿಪಿಯಾಗಿ ನೇಮಿಸಿದ ರಾಜ್ಯ ಸರ್ಕಾರ

- Advertisement -
- Advertisement -

ಬೆಂಗಳೂರು: ಡಾ.ಅಲೋಕ್ ಮೋಹನ್ ರನ್ನು ಕರ್ನಾಟಕದ ಉಸ್ತುವಾರಿ ಡಿಜಿ ಮತ್ತು ಐಜಿಪಿಯಾಗಿ ನೇಮಿಸಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಸಿಬಿಐ ಡೈರೆಕ್ಟರ್ ಆಗಿ ನೇಮಕಗೊಳಿಸಲಾಗಿತ್ತು.  ಈ ಹಿನ್ನೆಲೆ ಡಾ.ಅಲೋಕ್ ಮೋಹನ್ ಅವರಿಗೆ ಹೆಚ್ಚುವರಿಯಾಗಿ ಕರ್ನಾಟಕ ಡಿಜಿಪಿ ಹುದ್ದೆಯ ಹೊಣೆಗಾರಿಕೆ ನೀಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, 1987ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಡಾ.ಅಲೋಕ್ ಮೋಹನ್ ಅವರು ಪ್ರಸ್ತುತ ಹೋಂ ಗಾರ್ಡ್ ನ ಡಿಜಿಪಿ ಮತ್ತು ಕಾಮಾಂಡೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಹೆಚ್ಚುವರಿಯಾಗಿ ಕರ್ನಾಟಕ ಡೈರೆಕ್ಟರ್ ಜನರಲ್ ಅಂಡ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯ ಹೊಣೆಗಾರಿಕೆ ವಹಿಸಲಾಗಿದೆ ಎಂದಿದೆ.

ಇದಷ್ಟೇ ಅಲ್ಲದೇ ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಬೆಂಗಳೂರು ಇದರ ಛೇರ್ಮನ್ ಆಗಿಯೂ ನಿಯೋಜಿಸಲಾಗಿದೆ. ಈ ಆದೇಶವು ದಿನಾಂಕ 22-05-2023ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

- Advertisement -

Latest News

error: Content is protected !!