Thursday, June 4, 2026
Homeಕರಾವಳಿಮಂಗಳೂರು: ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಮಂಗಳೂರು: ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

- Advertisement -
- Advertisement -

ಮಂಗಳೂರು: ರಸ್ತೆ ದಾಟುತ್ತಿದ್ದಾರ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಅಳಪೆ ಗ್ಯಾಲರಿ ಅಪಾರ್ಟ್ಮೆಂಟ್ ಮುಂದಿನ ರಸ್ತೆಯಲ್ಲಿ ನಡೆದಿದೆ.  ಸುಧಾಕರ ಶೆಟ್ಟಿ ಮೃತ ದುರ್ದೈವಿ.

ಮೇ 19ರ ಮುಂಜಾನೆ 5:30ಕ್ಕೆ ಪಂಪ್ವೆಲ್ ನಿಂದ ಪಡೀಲ್ ಕಡೆಗೆ ಹಾದು ಹೋಗಿರುವ ರಸ್ತೆಯನ್ನು ಸುಧಾಕರ ಶೆಟ್ಟಿ ದಾಟುತ್ತಿರುವಾಗ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದಿದೆ. ಅಪಘಾತ ಎಸಗಿದ ಆರೋಪಿಯು ಸ್ಥಳದಿಂದ ಬಸ್ ಸಮೇತ ಪರಾರಿಯಾಗಿದ್ದ. ಸುಧಾಕರ್ ಶೆಟ್ಟಿ ಅವರನ್ನು ಸ್ಥಳೀಯರು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಸುಧಾಕರ ಶೆಟ್ಟಿಯ ಪುತ್ರ ಸುಶ್ರಾಥ್ ಶೆಟ್ಟಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಪರೀಕ್ಷಿಸಿದ ವೈದ್ಯರು ಬೆಳಗ್ಗೆ 7:15ಕ್ಕೆ ಸುಧಾಕರ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಆರೋಪಿ ಬಸ್ ಚಾಲಕ ದಯಾನಂದನ ವಿರುದ್ಧ ಸುಶ್ರಾಥ್ ಶೆಟ್ಟಿ ನೀಡಿದ ದೂರಿನಂತೆ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!