Thursday, June 4, 2026
Homeಕರಾವಳಿಸುಳ್ಯ; ಕುಕ್ಕುಜಡ್ಕದಲ್ಲಿ ತಂದೆ ಮಗನ ಗಲಾಟೆ ಅಪ್ಪನ ಸಾವಿನಲ್ಲಿ ಅಂತ್ಯ

ಸುಳ್ಯ; ಕುಕ್ಕುಜಡ್ಕದಲ್ಲಿ ತಂದೆ ಮಗನ ಗಲಾಟೆ ಅಪ್ಪನ ಸಾವಿನಲ್ಲಿ ಅಂತ್ಯ

- Advertisement -
- Advertisement -

ಸುಳ್ಯ : ತಂದೆ ಮಗನ ಗಲಾಟೆ ಅಪ್ಪನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಸುಳ್ಯದ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ನಡೆದಿದೆ. ಕಳೆದ ಒಂದು ವಾರದ ಹಿಂದೆ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿತ್ತು. ನಂತರ ಹೊಡೆದಾಟ ನಡೆದಿತ್ತು. ಪರಿಣಾಮ ತಂದೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇದೀಗ ಚಿಕಿತ್ಸೆ ಫಲಿಸದೇ ತಂದೆ ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಕುಕ್ಕುಜಡ್ಕ ನಿವಾಸಿಯಾಗಿರುವ ಕಿಟ್ಟು ಹಾಗೂ ಅವರ ಮೊದಲನೆ ಹೆಂಡತಿಯ ಮಗ ಹರ್ಷಿತ್ ನಡುವೆ ಹಳೆ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಹೊಡೆದಾಟವಾಗಿ ಮಗ ಹರ್ಷಿತ್ ಅಡಿಕೆ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ .ಗಂಭೀರ ಗಾಯಗೊಂಡಿದ್ದ ಕಿಟ್ಟುರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!