Thursday, June 4, 2026
Homeಉತ್ತರ ಕನ್ನಡಕಾರವಾರದಲ್ಲಿ ಬಾವಿಗೆ ಬಿದ್ದ ಪಂಪ್ ಸೆಟ್ ತೆಗೆಯಲು ಹೋಗಿ ಮೂವರು ಸಾವು

ಕಾರವಾರದಲ್ಲಿ ಬಾವಿಗೆ ಬಿದ್ದ ಪಂಪ್ ಸೆಟ್ ತೆಗೆಯಲು ಹೋಗಿ ಮೂವರು ಸಾವು

- Advertisement -
- Advertisement -

ಕಾರವಾರ: ಬಾವಿಗೆ ಬಿದ್ದ ಪಂಪ್ ಸೆಟ್ ತೆಗೆಯಲು ಹೋಗಿ ಮೂವರು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದಲ್ಲಿ ನಡೆದಿದೆ ಗೋವಿಂದ ಸೋಮಯ್ಯ ಪೂಜಾರಿ (48), ಗಣೇಶ್ ರಾಮದಾಸ್ ಶೇಟ್ (23), ಸುರೇಶ್ ನಾಯರ್ (38) ಸಾವನ್ನಪ್ಪಿದ ದುರ್ದೈವಿಗಳು.

ಶಿರಸಿಯ ದೇವನಿಲಯದ ನಿವಾಸಿ ಗೋವಿಂದ ಸೋಮಯ್ಯ ಪೂಜಾರಿ ಎನ್ನುವವರು ಯಲ್ಲಾಪುರ ತಾಲೂಕಿನ ಮಾವಿಕಟ್ಟಾದ ಮನೆಯ ಪಂಪ್‌ ಸರಿಪಡಿಸುವಾಗ ಬಾವಿಯೊಳಗೆ ಬಿದ್ದಿದ್ದಾರೆ. ಇವರನ್ನು ರಕ್ಷಿಸಲೆಂದು ಅಲ್ಲೇ ಇದ್ದ ಮಾವಿನಕಟ್ಟಾದ ಗಣೇಶ ರಾಮದಾಸ್‌ ಶೇಟ್‌ ಹಾಗೂ ಭರತನಹಳ್ಳಿಯ ಸುರೇಶ ನಾಯರ್‌ ಬಾವಿಯೊಳಗೆ ಇಳಿದಿದ್ದಾರೆ. ಈ ವೇಳೆ, ಮೂವರೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಯಲ್ಲಾಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!