Friday, June 5, 2026
Homeಕರಾವಳಿಪುತ್ತೂರು; ಅನ್ಯಕೋಮಿನ ಯುವಕರೊಂದಿಗೆ ಸಿನಿಮಾ ನೋಡಲು ತೆರಳಿದ ಯುವತಿ; ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ತಂಡ

ಪುತ್ತೂರು; ಅನ್ಯಕೋಮಿನ ಯುವಕರೊಂದಿಗೆ ಸಿನಿಮಾ ನೋಡಲು ತೆರಳಿದ ಯುವತಿ; ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ತಂಡ

- Advertisement -
- Advertisement -

ಪುತ್ತೂರು; ಅನ್ಯಕೋಮಿನ ಯುವಕರೊಂದಿಗೆ ಸಿನಿಮಾ ನೋಡಲು ಯುವತಿಯೊಬ್ಬಳು ತೆರಳಿದ್ದಳು. ಈ ವೇಳೆ ಜ್ಯೂಸ್ ಕುಡಿಯಲು ಹೋದಾಗ ಯುವತಿಯ ಜೊತೆಗಿದ್ದ ಯುವಕನಿಗೆ ತಂಡವೊಂದು  ಹಿಗ್ಗಾಮುಗ್ಗಾ ಥಳಿಸಿದ ಘಟನ ಪುತ್ತೂರಿನಲ್ಲಿ ನಡೆದಿದೆ. ಮಹಮ್ಮದ್ ಫಾರಿಶ್ (18) ಹಲ್ಲೆಗೊಳಗಾದ ಯುವಕ.

ಫಾರಿಶ್ ಸದ್ಯ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಸುಮಾರು 30 ರಿಂದ 50 ಯುವಕರ ತಂಡ ಈತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಘಟನೆಯನ್ನ ಎಸ್ಡಿಪಿಐ ಹಾಗೂ ಮುಸ್ಲಿಂ ಯುವಜನ ಪರಿಷತ್ ಖಂಡಿಸಿದೆ. ಹಾಗೆಯೇ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.  ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹಾಗೂ ಉಪನಿರೀಕ್ಷಕ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ.

- Advertisement -

Latest News

error: Content is protected !!