Friday, June 5, 2026
Homeಕರಾವಳಿಉಡುಪಿಉಡುಪಿ: ನಾನು ಹಸಿ ಮೀನು ಮುಟ್ಟಿದ್ದೇನೆಂದು ದೇವಸ್ಥಾನದ ಒಳಗೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ

ಉಡುಪಿ: ನಾನು ಹಸಿ ಮೀನು ಮುಟ್ಟಿದ್ದೇನೆಂದು ದೇವಸ್ಥಾನದ ಒಳಗೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ

- Advertisement -
- Advertisement -

ಉಡುಪಿ: ಕಾಪು ತಾಲೂಕಿನ ಉಚ್ಚಿಲಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಲ್ಲಿನ ಶಾಲಿನಿ ಡಾ.ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಜಿಲ್ಲೆಯ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಈ  ಕಾರ್ಯಕ್ರಮದ ಬಳಿಕ ಪಕ್ಕದಲ್ಲೇ ಇರುವ ಪುನರ್ನಿಮಾಣಗೊಂಡ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರಾದರೂ ದೇವಸ್ಥಾನ ದೊಳಗೆ ತೆರಳಲು ನಿರಾಕರಿಸಿದ್ದಾರೆ.

ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಮೀನುಗಾರ ಮಹಿಳೆಯೊಬ್ಬರು ನೀಡಿದ ಭಾರೀ ಗಾತ್ರದ ‘ಅಂಜಲ್’ ಮೀನನ್ನು ಸ್ವೀಕರಿಸಿದ ರಾಹುಲ್ ಗಾಂಧಿ ಬಳಿಕ ಅದನ್ನು ಪಕ್ಕದಲ್ಲಿದ್ದ ಕಾಂಗ್ರೆಸ್ ಮುಖಂಡ ಪ್ರತಾಪನ್ ಅವರಿಗೆ ನೀಡಿದರು.ಇಲ್ಲಿಗೆ ಬರುವ ಸ್ವಲ್ಪ ಮೊದಲು ತಾನು ಹಸಿ ಮೀನು ಮುಟ್ಟಿದ್ದರಿಂದ ದೇವಸ್ಥಾನದ ಒಳಗೆ ಹೋಗಲು ರಾಹುಲ್ ಗಾಂಧಿ ನಿರಾಕರಿಸಿದರು. ದೇವಸಾನಕ್ಕೆ ಭೇಟಿ ನೀಡಿದ ಅವರನ್ನು ಒಳಗೆ ಬರಲು ಹೇಳಿದಾಗ ನಾನು ಮೀನು ಮುಟ್ಟಿರುವುದರಿಂದ ಒಳಗೆ ಹೋಗಲು ಆಗುವುದಿಲ್ಲ ಎಂದು ಒಳಗೆ ಹೋಗಲು ನಿರಾಕರಿಸಿದ್ದಾರೆ.

- Advertisement -

Latest News

error: Content is protected !!