Thursday, June 4, 2026
Homeತಾಜಾ ಸುದ್ದಿಮೈಸೂರಿನಲ್ಲಿ ಕುಡುಕನೊಬ್ಬನ ಹುಚ್ಚಾಟ; ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ಭೂಪ

ಮೈಸೂರಿನಲ್ಲಿ ಕುಡುಕನೊಬ್ಬನ ಹುಚ್ಚಾಟ; ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ಭೂಪ

- Advertisement -
- Advertisement -

ಮೈಸೂರು; ಕುಡಿದ ಮತ್ತಿನಲ್ಲಿ ಮೈಸೂರಿನ ಹುಣಸೂರಿನಲ್ಲಿ ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿದ್ದಾನೆ. ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಪೇಚೆಗೆ ಸಿಲುಕಿದ ಘಟನೆ ನಡೆದಿದೆ.ಹುಣಸೂರಿನ ತೊಂಡಾಳು ಗ್ರಾಮದಲ್ಲಿ ರಾಜಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನು ಕತ್ತರಿಸಿದ್ದಾನೆ.

ಕುಡಿದ ಮತ್ತಿನಲ್ಲಿ ರಾಜಶೆಟ್ಟಿ ಶುಕ್ರವಾರ ತಡ ರಾತ್ರಿ ಮದ್ಯದ ನಶೆಯಲ್ಲಿ ತೂರಾಡುತ್ತಾ ಮನೆ ಕಡೆ ಹೋಗುವಾಗ ಕೆಲವರು ಬೈದಿದ್ದಾರೆ.ಇದರಿಂದ ಮನೆಯೊಂದರ ಬಳಿ ಇಟ್ಟಿದ್ದ ಕುಡುಗೋಲಿನಿಂದ ಏಕಾಏಕಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ.ಬಳಿಕ ನೋವಿನಿಂದ ಚೀರಾಡಿದ್ದಾನೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!