Wednesday, June 3, 2026
Homeಕರಾವಳಿಬೆಳ್ತಂಗಡಿ : ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಬೇಲಿ ಹಾಕಿದ ಕಿಡಿಗೇಡಿ

ಬೆಳ್ತಂಗಡಿ : ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಬೇಲಿ ಹಾಕಿದ ಕಿಡಿಗೇಡಿ

- Advertisement -
- Advertisement -

ಬೆಳ್ತಂಗಡಿ : ಕಳೆದ 30 ವರ್ಷಗಳಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಗೆ ಬೇಲಿ ಹಾಕಿ ಖಾಸಗಿ ವ್ಯಕ್ತಿಯೊಬ್ಬರು ವಿಕೃತಿ ಮೆರೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಎ.2 ರಂದು ಸಂಜೆ ದೂರವಾಣಿ ಸಂಪರ್ಕದ ಕಂಬವನ್ನು ಬಳಸಿ ಬೇಲಿ ಹಾಕಲಾಗಿದೆ.

ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಎ.3 ರಿಂದ ಎ.7 ರವರೆಗೆ ಬ್ರಹ್ಮಕಲಶೋತ್ಸವ ನಿಗದಿಯಾಗಿದ್ದು ಇದಕ್ಕೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ನಿಂದ ರಸ್ತೆ ಸರಿಪಡಿಸುವ ಕಾರ್ಯವನ್ನು ಎ.2 ರಂದು ಜೆಸಿಬಿ ಮೂಲಕ ಆರಂಭಿಸಿದ್ದು ಇದಕ್ಕೆ ಏಕಾಏಕಿ ಖಾಸಗಿ ವ್ಯಕ್ತಿ ನುಗ್ಗಿ ಜೆಸಿಬಿಗೆ ಅಡ್ಡನಿಂತು ಕೆಲ ಸ್ಥಳೀಯರನ್ನು ಉಪಯೋಗಿಸಿ ಜೆಸಿಬಿಯನ್ನು ವಾಪಸ್ ಕಳುಹಿಸಿ ನಂತರ ಬೇಲಿ ಹಾಕಲಾಗಿದೆ. ಇದಕ್ಕೆ ಕಂಗಾಲದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸೈಲೆಂಟ್ ಅಗಿದೆ.

ಹಲವು ವರ್ಷ ರಸ್ತೆಯ ಬಗ್ಗೆ ಬೆಳ್ತಂಗಡಿ ಕೋರ್ಟ್‌ ನಲ್ಲಿ ವಿವಾದ ಇದ್ದು ಕಳೆದ ವರ್ಷ ನ್ಯಾಯಾಲಯಲ್ಲಿ ಲೋಕ ಅದಾಲತ್ ನಲ್ಲಿ ರಾಜಿಯಾಗಿ ರಸ್ತೆಯನ್ನು ಗ್ರಾಮ ಪಂಚಾಯತ್ ಗೆ ಹಸ್ತಾಂತರ ಮಾಡಲಾಗಿತ್ತು. ಆದ್ರೆ ಖಾಸಗಿ ವ್ಯಕ್ತಿಯೊಬ್ಬರು ಕೆಲ ಸ್ಥಳೀಯರನ್ನು ಉಪಯೋಗಿಸಿ ರೌಡಿಸಂ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀ ದೇವಿ ಭಗವತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯದ ಕೆಲಸ ನಡೆಯುತ್ತಿದ್ದು ರಸ್ತೆ ಬಂದ್ ಮಾಡಿರುವ ಕಾರಣ ದೇವಸ್ಥಾನದ ಆಡಳಿತ ಮಂಡಳಿ ಕಂಗಲಾಗಿದೆ‌. ಇನ್ನು ರಸ್ತೆ ಕೆಲಸವನ್ನು ಮಾಡಬೇಕಾದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಕೂಡಾ ಸೈಲೆಂಟ್ ಆಗಿದೆ.

- Advertisement -

Latest News

error: Content is protected !!