Friday, June 5, 2026
Homeಕರಾವಳಿವಿಟ್ಲ; ಮನೆಗೆ ನುಗ್ಗಿ ಚಿನ್ನಾಭರಣ ಕದ್ದಿದ್ದ ಆರೋಪಿಯ ಬಂಧನ

ವಿಟ್ಲ; ಮನೆಗೆ ನುಗ್ಗಿ ಚಿನ್ನಾಭರಣ ಕದ್ದಿದ್ದ ಆರೋಪಿಯ ಬಂಧನ

- Advertisement -
- Advertisement -

ವಿಟ್ಲ : ಅಂಗಡಿ ಮಾಲೀಕರೊಬ್ಬರ ಮನೆಗೆ ನುಗ್ಗಿ  ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ,  ವಿಟ್ಲದ ಕಸಬ ಗ್ರಾಮದ ರಂಗರಮಜಲು ನಿವಾಸಿ ಮನು ಅಲಿಯಾಸ್‌ ಮನೋಹರ ಬಂಧಿತ ಆರೋಪಿ .

ಜ. 20 ರಿಂದ ಮಾ. 20 ರವರೆಗೆ ಎರಡು ತಿಂಗಳ ಕಾಲ ವಿಟ್ಲ ಕಸಬ ಗ್ರಾಮದ ರಂಗರಮಜಲು ಮುರಳೀಧರ ಎಂಬವರ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿ ಒಟ್ಟು 3,20,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ.ಈ ಕುರಿತು ಮುರಳೀಧರ್ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!