Thursday, June 4, 2026
Homeಕರಾವಳಿಉಪ್ಪಿನಂಗಡಿ:  ಮಗಳ ಮದುವೆಗೆ ಚಿನ್ನ ಖರೀದಿಸಲು ಹೋಗುವಾಗ 10 ಲಕ್ಷ ರೂ ನಗದು ದೋಚಿದ ಪ್ರಕರಣ; ಓರ್ವ ಆರೋಪಿಯನ್ನು ಬಂಧಿಸಿದ...

ಉಪ್ಪಿನಂಗಡಿ:  ಮಗಳ ಮದುವೆಗೆ ಚಿನ್ನ ಖರೀದಿಸಲು ಹೋಗುವಾಗ 10 ಲಕ್ಷ ರೂ ನಗದು ದೋಚಿದ ಪ್ರಕರಣ; ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಉಪ್ಪಿನಂಗಡಿ;ಮಗಳ ಮದುವೆಗೆ ಚಿನ್ನವನ್ನು ಖರೀದಿಸಲು 10 ಲಕ್ಷ ತೆಗೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿಹಣವನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು 9ಲಕ್ಷ ನಗದಿನೊಂದಿಗೆ ವಶಪಡಿಸಿಕೊಂಡಿದ್ದಾರೆ

ಇಳಂತಿಲ ಗ್ರಾಮದ ಪೆದಮಲೆಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ  ಕರ‍್ಯಪಾಡಿ ಮನೆ ನಿವಾಸಿ ಮಹಮ್ಮದ್ ಕೆ(60) ಅವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ ರೂ.ವನ್ನು ಬಟ್ಟೆಯ ಚೀಲದಲ್ಲಿ ತುಂಬಿಸಿದ ಹಣವನ್ನು ಅವರು ದ್ವಿಚಕ್ರ ವಾಹನದ ಸೀಟಿನ್ನೆತ್ತಿ ಅದರಲ್ಲಿ ಇಡುತ್ತಿದ್ದಂತೆಯೇ  ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿದ್ದನು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಓರ್ವನನ್ನು ಬಂಧಿಸಲಾಗಿದ್ದು ಮತ್ತೋರ್ವವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!