Sunday, May 5, 2024
Homeಕರಾವಳಿಕದ್ರಿ ದೇವಸ್ಥಾನದಿಂದ ಕೊರಗಜ್ಜನ ಆದಿ ಕ್ಷೇತ್ರಕ್ಕೆ ವಿಹಿಂಪ ಪಾದಯಾತ್ರೆ

ಕದ್ರಿ ದೇವಸ್ಥಾನದಿಂದ ಕೊರಗಜ್ಜನ ಆದಿ ಕ್ಷೇತ್ರಕ್ಕೆ ವಿಹಿಂಪ ಪಾದಯಾತ್ರೆ

spot_img
- Advertisement -
- Advertisement -

ಮಂಗಳೂರು: ವಿಶ್ವ ಹಿಂದೂ ಪರಿಷತ್ ವತಿಯಿಂದ ಇಂದು ಕೊರಗಜ್ಜನ ಆದಿ ಕ್ಷೇತ್ರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.‌ ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜ ಆದಿಕ್ಷೇತ್ರಕ್ಕೆ ಪಾದಯಾತ್ರೆ ಆಯೋಜಿಸಲಾಗಿತ್ತು.

ಹಿಂದೂ ವಿರೋಧಿ ಕೃತ್ಯಗಳು ಮಾಯವಾಗಿ ಹಿಂದೂ ಸಮಾಜದ ಐಕ್ಯತೆಯಾಗಲಿ ಹಾರೈಸಿ ನಡೆದ ಪಾದಯಾತ್ರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಭಕ್ತರು ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಾಗಿಯಾಗಿದ್ದರು.

ಸುಮಾರು 12 ಕಿಲೋ ಮೀಟರ್ ದೂರ ನಡೆದ ಪಾದಯಾತ್ರೆಯಲ್ಲಿ ಬರಿಗಾಲಿನಲ್ಲಿ ಯುವತಿಯರು, ಮಹಿಳೆಯರು ಮತ್ತು ಮಕ್ಕಳು ಕೂಡಾ ಪಾಲ್ಗೊಂಡಿದ್ದರು.

ಪಾದಯಾತ್ರಿಗಳು ಬರುವ ದಾರಿಯುದ್ದಕ್ಕೂ ನೀರು ಹಾಕಿ ಸ್ವಚ್ಚತೆ ಕೈಗೊಳ್ಳಲಾಗಿತ್ತಲ್ಲದೇ, ಪಾದಯಾತ್ರಿಗಳಿಗೆ ಬೆಲ್ಲ ಮತ್ತು ನೀರಿನ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

ಪಾದಯಾತ್ರೆ ಮುಗಿದ ಬಳಿಕ ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಹಿಂದೂ ವಿರೋಧಿ ಘಟನೆಗಳು ಮರೆಯಾಗುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಪಾದಯಾತ್ರೆ ಹಮ್ಮಿಕೊಳ್ಳುತ್ತಿದೆ.

- Advertisement -
spot_img

Latest News

error: Content is protected !!