Friday, June 5, 2026
Homeಕರಾವಳಿಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿ ಯುವ ಸಮುದಾಯಕ್ಕೆ ಸ್ಫೂರ್ತಿಯಾದ ಚಂದ್ರಹಾಸ ಬಳಂಜ

ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿ ಯುವ ಸಮುದಾಯಕ್ಕೆ ಸ್ಫೂರ್ತಿಯಾದ ಚಂದ್ರಹಾಸ ಬಳಂಜ

- Advertisement -
- Advertisement -

ಬೆಳ್ತಂಗಡಿ: ಸೇವೆ ಯಾವ ರೂಪದಲ್ಲೂ ಬೇಕಾದರು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಬಹುಮುಖ‌ ಪ್ರತಿಭೆ,ಸ್ನಾತಕೋತ್ತರ ಪದವಿದಾರ ಚಂದ್ರಹಾಸ ಬಳಂಜ ಕ್ಯಾನ್ಸರ್‌ ಪೀಡಿತರಿಗಾಗಿ ತಮ್ಮ‌ ಕೇಶವನ್ನ ದಾನ‌ ಮಾಡಿದ್ದಾರೆ.

ಯುವ ಶಕ್ತಿ‌ ಸೇವಾ ಪಥ ತಂಡದ ಜೊತೆಗೆ ಸೇರಿಕ್ಕೊಂಡು ತಮ್ಮ‌ ಕೇಶವನ್ನ ದಾನ‌ಮಾಡಿ ಯುವ ಸಮುದಾಯಕ್ಕೆ ಈ‌ ಮುಖೇನ ಆದರ್ಶರಾಗಿದ್ದಾರೆ.‌

ಯುವಕರು ಈ‌ ರೀತಿಯ ಕೆಲಸಗಳನ್ನು ಮಾಡಲು ಆದಷ್ಟು ಮುಂದೆ ಬರಬೇಕು‌ ಮತ್ತು ಇನ್ನಷ್ಟು‌ ಜನರಿಗೆ ಅದು‌ ಸ್ಫೂರ್ತಿಯಾಗಬೇಕು. ಹಾಗು ಇದರಿಂದ ಕ್ಯಾನ್ಸರ್‌ ಪೀಡಿತರಿಗು ಕೂಡ ಹೊಸ ಭರವಸೆಯನ್ನ ತುಂಬುವಲ್ಲಿ‌ ಸಹಕಾರಿಯಾಗುತ್ತದೆ.

ಬಹುಮುಖ‌ ಪ್ರತಿಭೆಯಾಗಿರುವ ಇವರು ತಮ್ಮ‌ ಪ್ರತಿಭೆ‌‌ ಮುಖೇನ‌ ರಾಜ್ಯ‌,ರಾಷ್ಟ್ರ‌ಮಟ್ಟದ‌ ಪ್ರಶಸ್ತಿಗಳನ್ನ ಪಡೆದಿದ್ದು ಒಬ್ಬ ತರಬೇತುದಾರರಾಗಿಯೂ ಶಾಲಾ‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ , ಯುವ ಸಮುದಾಯಕ್ಕೆ‌ ಸ್ಫೂರ್ತಿದಾಯಕ ತರಬೇತಿಗಳನ್ನ ನಡೆಸುತ್ತ ಬರುತ್ತಿದ್ದಾರೆ.

ಇವರು ಸಂತೋಷ್ ಪಿ ಕೋಟ್ಯಾನ್ ಬಳಂಜರವರ ಸಹೋದರ.

- Advertisement -

Latest News

error: Content is protected !!