Wednesday, June 3, 2026
Homeಕರಾವಳಿಬಂಟ್ವಾಳ; ಈ ಬಾರಿಯ ಚುನಾವಣೆ ನನ್ನ ಕೊನೆಯ ಚುನಾವಣೆ; ಚುನಾವಣಾ ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟ...

ಬಂಟ್ವಾಳ; ಈ ಬಾರಿಯ ಚುನಾವಣೆ ನನ್ನ ಕೊನೆಯ ಚುನಾವಣೆ; ಚುನಾವಣಾ ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟ ಮಾಜಿ ಸಚಿವ ರಮಾನಾಥ್ ರೈ

- Advertisement -
- Advertisement -

ಬಂಟ್ವಾಳ: ಈ ಬಾರಿಯ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಸಚಿವ ರಮಾನಾಥ್ ರೈ ಚುನಾವಣಾ ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ.

ಬಂಟ್ವಾಳ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಚುನಾವಣೆಗೆ ನಿಲ್ಲುವುದಕ್ಕಾಗಿ ಎಲ್ಲಿಂದಲೋ ಬಂಟ್ವಾಳಕ್ಕೆ ಬಾರದೆ ಇಲ್ಲಿಂದಲೇ ರಾಜಕೀಯವನ್ನು ಆರಂಭಿಸಿದ್ದೇನೆ. ಕಾಂಗ್ರೆಸ್‌ ನೀಡಿದ ಎಲ್ಲ ಅವಕಾಶಗಳನ್ನು ಬಳಸಿ ಜನಸೇವೆ ಮಾಡಿದ್ದೇನೆ. ಈವರೆಗೆ 8 ಬಾರಿ ಸ್ಪರ್ಧಿಸಿದ್ದು ಶಾಸಕನಾಗಿ, ಸಚಿವನಾಗಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ.ಮುಂದಿನದು 9ನೇ ಚುನಾವಣೆಯಾಗಿದ್ದು, ಕೊನೆಯ ಬಾರಿಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಹೇಳಿದ್ದನ್ನು ಮಾಡಿದ್ದು, ಮಾಡಿದ್ದನ್ನೇ ಹೇಳಿದ್ದೇನೆ. ಯಾರೋ ಮಾಡಿರುವುದನ್ನು ತನ್ನದೆಂದು ಹೇಳುವ ಜಾಯಮಾನ ನನ್ನದಲ್ಲ. ಜನರು ಅವಕಾಶ ನೀಡಿದರೆ ಅದ್ಭುತವಾಗಿ ಕೆಲಸ ಮಾಡಿ ತೋರಿಸಲಿದ್ದೇನೆ ಎಂದಿದ್ದಾರೆ. ಮಾ. 10ರಿಂದ ಕ್ಷೇತ್ರದಾದ್ಯಂತ ಕಾಂಗ್ರೆಸ್‌ ರಥ ಯಾತ್ರೆಯನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!