Thursday, June 4, 2026
Homeಕರಾವಳಿಸ್ವಂತ ಅಳಿಯನನ್ನೇ ಕಿಡ್ನ್ಯಾಪ್‌ ಮಾಡಿಸಿದ ಪ್ರಕರಣ; ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ವಿರುದ್ಧ ಎಫ್ ಐ ಆರ್...

ಸ್ವಂತ ಅಳಿಯನನ್ನೇ ಕಿಡ್ನ್ಯಾಪ್‌ ಮಾಡಿಸಿದ ಪ್ರಕರಣ; ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ವಿರುದ್ಧ ಎಫ್ ಐ ಆರ್ ದಾಖಲು

- Advertisement -
- Advertisement -

ಬೆಂಗಳೂರು: ಸ್ವಂತ ಅಳಿಯನನ್ನೇ ಕಿಡ್ನ್ಯಾಪ್‌ ಮಾಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕಿ  ದಿವ್ಯಪ್ರಭಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸ್ವಂತ ಅಳಿಯನನ್ನೇ ಕಿಡ್ನ್ಯಾಪ್‌ ಮಾಡಿಸಿದ್ದರು ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥನೆಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂದು ಅಳಿಯ ನವೀನ್‌ಗೌಡ ದೂರು ನೀಡಿದ್ದರು.

ದೂರನ್ನಾಧರಿಸಿ ದಿವ್ಯಪ್ರಭಾ, ಮಗಳು ಸ್ಪಂದನಾ, ಪತಿ ಪರಶುರಾಮ್ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿ‌ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ದಿವ್ಯಪ್ರಭಾ ಮಗಳು ಸ್ಪಂದನಾರನ್ನ ಮದುವೆಯಾಗಿ ಕೌಟುಂಬಿಕ ಕಾರಣಗಳಿಂದ ದೂರವಾಗಿದ್ದೆ. ಸ್ಪಂದನಾಗೆ ಅಕ್ರಮ ಸಂಬಂಧವಿದೆ ಅಂತಾ ತಿಳಿದು, ಒಂದಿಷ್ಟು ಅಶ್ಲೀಲ ಚಾಟ್‌ಗಳನ್ನೂ ನೋಡಿದ್ದರಿಂದ ಕುಟುಂಬದಿಂದ ದೂರವಾಗಿದ್ದೆ. ಹಾಗಾಗಿ ದಿವ್ಯಾಪ್ರಭಾ ಮನೆಯಿಂದಲೇ ನನ್ನನ್ನ ಕಿಡ್ನ್ಯಾಪ್‌ ಮಾಡಿಸಿದ್ರು. ನಂತರ ಜೆ.ಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥನೆಂದು ಬಿಂಬಿಸಲು ಪ್ರಯತ್ನಪಟ್ಟಿದ್ದರು ಎಂದು ನವೀನ್‌ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!