Wednesday, May 15, 2024
Homeಕರಾವಳಿಪುತ್ತೂರು: ಹೃದಯಾಘಾತವಾಗಿ ರೈಲಿನಿಂದ ಬಿದ್ದು ಹಿರಿಯ ವಕೀಲ ಸಾವು

ಪುತ್ತೂರು: ಹೃದಯಾಘಾತವಾಗಿ ರೈಲಿನಿಂದ ಬಿದ್ದು ಹಿರಿಯ ವಕೀಲ ಸಾವು

spot_img
- Advertisement -
- Advertisement -

ಪುತ್ತೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತವಾಗಿ ರೈಲಿನಿಂದ ಬಿದ್ದು ಹಿರಿಯ ವಕೀಲರೊಬ್ಬರು ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಹಿರಿಯ ನ್ಯಾಯವಾದಿ ನಗರದ ಎಪಿಎಂಸಿ ರಸ್ತೆ ನೆಲ್ಲಿಕಟ್ಟೆ ನಿವಾಸಿ ಕೆ.ಪಿ.ಜೇಮ್ಸ್ ಮೃತ ವಕೀಲ. ಕೆ.ಪಿ.ಜೇಮ್ಸ್ ಮತ್ತು ಅವರ ಪತ್ನಿ ಇಬ್ಬರು ಫೆ.15ರಂದು ಸಂಜೆ ತಮಿಳುನಾಡಿನ ಚೆಂಗನೂರಿನ ಧಾರ್ಮಿಕ ಕ್ಷೇತ್ರವೊಂದಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್‌ನಲ್ಲಿದ್ದ ಅವರು ರಾತ್ರಿ ವೇಳೆ ಕೆ.ಪಿ.ಜೇಮ್ಸ್ ಶೌಚಾಲಯಕ್ಕೆಂದು ಹೋಗಿದ್ದರು. ತನ್ನ ಗಂಡ ಶೌಚಾಲಯಕ್ಕೆ ಹೋದವರು ಎಷ್ಟು ಹೊತ್ತಾದರೂ ಬಾರದೆ ಇರುವುದನ್ನು ಅವರ ಪತ್ನಿ ನೋಡಲು ಹೋದಾಗ ಗಂಡ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಕಿರುಚಾಡಿದಾಗ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದಿದ್ದಾರೆ ಎಂದು ರೈಲಿನಲ್ಲಿದ್ದ ಉಳಿದವರು ಹೇಳಿದ್ದಾರೆ.

ತಕ್ಕೇರಿ ಬಳಿಯ ಧರ್ಮಡಮ್ ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಮೃತ ದೇಹ ಪತ್ತೆ ಮಾಡಿದ ರೈಲ್ವೇ ಪೊಲೀಸರು ತನ್ನೇರಿಯ ಆಸ್ಪತ್ರೆಯ ಶವಾಗರ ಕೊಠಡಿಯಲ್ಲಿ ಇರಿಸಿದ್ದರು. ಕೆ.ಪಿ ಜೇಮ್ಸ್ ಅವರ ಪತ್ನಿ ಕೂಡಾ ತಲ್ವೇರಿಯಲ್ಲಿ ನನ್ನ ಗಂಡ ರೈಲಿನಲ್ಲಿ ನಾಪತ್ತೆಯಾಗಿರುವ ಕುರಿತು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿಗೆ ಸಂಬಂಧಿಸಿ ರೈಲ್ವೇ ಪೊಲೀಸರು ಪತ್ತೆಯಾದ ಮೃತ ದೇಹವನ್ನು ಪರಿಶೀಲಿಸಿ ಮೃತ ದೇಹದ ಜೊತೆಯಲ್ಲಿದ್ದ ವಕೀಲ ಸದಸ್ಯತ್ವದ ಗುರುತು ಚೀಟಿ ಮತ್ತು ಭಾವಚಿತ್ರ ಆಧಾರಿಸಿ ಮೃತ ದೇಹ ಕೆ.ಪಿ. ಜೇಮ್ಸ್ ಅವರದ್ದು ಎಂದು ಗುರುತು ಹಿಡಿದಿದ್ದಾರೆ.

- Advertisement -
spot_img

Latest News

error: Content is protected !!