Saturday, June 6, 2026
Homeತಾಜಾ ಸುದ್ದಿಕೇರಳದಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ತೃತೀಯ ಲಿಂಗಿ ಜೋಡಿ

ಕೇರಳದಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ತೃತೀಯ ಲಿಂಗಿ ಜೋಡಿ

- Advertisement -
- Advertisement -

ಕೇರಳ; ಇಲ್ಲಿನ ಪಾಲಕ್ಕಾಡ್‌ ಜಿಲ್ಲೆಯ ಎಲವಚ್ಚೇರಿಯಲ್ಲಿ ಪ್ರೇಮಿಗಳ ದಿನದಂದೇ ತೃತೀಯ‌ ಲಿಂಗಿ ಜೋಡಿಯೊಂದು ಹೊಸ ಬದುಕಿಗೆ ಕಾಲಿಟ್ಟಿದೆ.

ಪಾಲಕ್ಕಾಡ್ ನ ಪ್ರವೀಣ್ ನಾಥ್ ಹಾಗೂ ಮಲಪ್ಪುರಂ ಜಿಲ್ಲೆಯ ಕೊಟ್ಟೈಕಲ್‌ನ ರಿಶಾನಾ ಐಶು ಪರಸ್ಪರ ಪ್ರೀತಿಸಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಇನ್ನು ಇವರ ವಿವಾಹಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು.ಕೊನೆಗೆ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿದೆ.

ಬಾಡಿಬಿಲ್ಡರ್ ಆಗಿರುವ ಪ್ರವೀಣ್‌ 2021ರಲ್ಲಿ ಮಿಸ್ಟರ್‌ ಕೇರಳ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ರಿಶಾನ ಐಶು ಮಾಡೆಲ್ ಆಗಿದ್ದು, ತ್ರಿಶ್ಯೂರ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

- Advertisement -

Latest News

error: Content is protected !!