Friday, June 5, 2026
Homeಕರಾವಳಿಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿದ ರಾಜ್ಯಪಾಲ ಗೆಹ್ಲೋಟ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿದ ರಾಜ್ಯಪಾಲ ಗೆಹ್ಲೋಟ್

- Advertisement -
- Advertisement -

ಸುಬ್ರಹ್ಮಣ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಮಂಗಳವಾರ ಪತ್ನಿ ಅನಿತಾ ಗೆಹ್ಲೋಟ್ ಹಾಗೂ ಮೊಮ್ಮಕ್ಕಳಾದ ರಂಜನಿ, ಧೀರಜ್ ಮತ್ತು ನವೀನ್ ಅವರೊಂದಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ರಾಜ್ಯಪಾಲರು ಭೇಟಿ ನೀಡಿದ್ದರು.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾಗ ಶ್ರೀವತ್ಸ, ಲೋಕೇಶ್, ಟ್ರಸ್ಟಿಗಳಾದ ವನಜ ಭಟ್, ಶೋಭ, ಗಿರಿಜಾ ಅವರು ರಾಜ್ಯಪಾಲರಿಗೆ ಸ್ವಾಗತ ಕೋರಿದರು.

ನಂತರ ರಾಜ್ಯಪಾಲರು ಪತ್ನಿ ಅನಿತಾ ಗೆಹ್ಲೋಟ್ ಅವರೊಂದಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಅ,ಆರ್. ರವಿಕುಮಾರ್ ಮತ್ತು ಎಸ್ ಪಿ ವಿಕ್ರಮ್ ಅಮಾಟೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!