Wednesday, June 3, 2026
Homeಕರಾವಳಿಉಡುಪಿಮಾಸ್ಕ್ ಧರಿಸದೆ ಓಡಾಡುವವರೇ ಎಚ್ಚರ: ಉಡುಪಿಯಲ್ಲಿ 27,000 ರೂ. ದಂಡ ಸಂಗ್ರಹ

ಮಾಸ್ಕ್ ಧರಿಸದೆ ಓಡಾಡುವವರೇ ಎಚ್ಚರ: ಉಡುಪಿಯಲ್ಲಿ 27,000 ರೂ. ದಂಡ ಸಂಗ್ರಹ

- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಾಸ್ಕ್ ಹಾಕದವರಿಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಕೋವಿಡ್-19 ಹರಡದಂತೆ ಜಗಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಆಯೋಜಿಸಲಾದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

- Advertisement -

Latest News

error: Content is protected !!