Saturday, June 6, 2026
Homeಕರಾವಳಿಪುತ್ತೂರು ಜೋಡುಕೆರೆ ಕಂಬಳದಲ್ಲಿ ನಟಿ ಸಾನ್ಯ ಅಯ್ಯರ್ ಕಿರಿಕ್ ವಿಚಾರ:ಕಂಬಳ‌ ಸಮಿತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ...

ಪುತ್ತೂರು ಜೋಡುಕೆರೆ ಕಂಬಳದಲ್ಲಿ ನಟಿ ಸಾನ್ಯ ಅಯ್ಯರ್ ಕಿರಿಕ್ ವಿಚಾರ:ಕಂಬಳ‌ ಸಮಿತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಕೆ

- Advertisement -
- Advertisement -

ಪುತ್ತೂರು: ಕಂಬಳದಲ್ಲಿ ಕಿರುತೆರೆ ನಟಿ ಸಾನಿಯಾ ಅಯ್ಯರ್ ಮತ್ತು ಸ್ನೇಹಿತೆಯರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಂಬಳದ ಬಗ್ಗೆ ಅಪಸ್ವರ ಎತ್ತಿದವರ ವಿರುದ್ಧ ಕಂಬಳ ಸಮಿತಿ ದೇವರ ಮೊರೆ ಹೋಗಿದೆ

ಪುತ್ತೂರು ಕೋಟಿ-ಚೆನ್ನಯ ಜೋಡುಕೆರೆ ಕಂಬಳ ಸಮಿತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕದಶರುದ್ರ ಸೇವೆ ಮಾಡಿಸಿ ಪ್ರಾರ್ಥನೆ ಸಲ್ಲಿಸಲಾಗಿದೆ.

ಕಂಬಳದ ಸಮಯದಲ್ಲಿ ನಡೆದ ಘಟನೆಗೂ ಕಂಬಳ ಸಮಿತಿಗೂ ಸಂಬಂಧವಿಲ್ಲವಾಗಿದ್ದು, ಅತಿಥಿಯಾಗಿ ಬಂದವರನ್ನು ಊಟ ಮಾಡಿಸಿ ಸುರಕ್ಷಿತವಾಗಿ ಕಳುಹಿಸಿ ಬಿಟ್ಟು ಬಂದಿದ್ದೇವೆ. ಅನಂತರ ಏನು ಆಗಿದೆ ಎಂದು ಮರುದಿನವಷ್ಟೇ ತಿಳಿದುಬಂದಿದ್ದು, ಪುತ್ತೂರಿನ ದೇವರಮಾರು ಗದ್ದೆಯಲ್ಲಿ ಜಗಳ ಅಥವಾ ಅಸಭ್ಯವಾಗಿ ನಡೆದರೆ ಅವರಿಗೆ ಕ್ಷೇಮವಿಲ್ಲ. ಘಟನೆಗೆ ಕಂಬಳ ಸಮಿತಿಯನ್ನು ಹೊಣೆ ಮಾಡಿದವರಿಗೆ ದೇವರೇ ಬುದ್ದಿ ನೀಡಲಿ ಎಂದು ಮಹಾಲಿಂಗೇಶ್ವರ ದೇವರ ಮುಂದೆ ಕಂಬಳ ಸಮಿತಿಯಿಂದ ಪ್ರಾರ್ಥನೆ ಸಲ್ಲಿಸಲಾಗಿದೆ.

ಕಂಬಳ‌ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತು ಮಾಜಿ‌ ಶಾಸಕಿ‌ ಶಕುಂತಲಾ ಶೆಟ್ಟಿ ಸೇರಿದಂತೆ ಅನೇಕರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವರಮಾರು ಗದ್ದೆಯಲ್ಲಿ ಕಳೆದ ಶನಿವಾರ ಕಂಬಳ ನಡೆದಿದ್ದು, ನಟಿ ಸಾನಿಯಾ ಅಯ್ಯರ್ ಅತಿಥಿಯಾಗಿ ಬಂದಿದ್ದರು.

ಮಧ್ಯರಾತ್ರಿ ಸ್ನೇಹಿತೆಯರೊಡನೆ ಮತ್ತೆ ಕಂಬಳ ವೀಕ್ಷಣೆಗೆ ಆಗಮಿಸಿದ್ದ ವೇಳೆ ಯುವಕನೊಬ್ಬನಿಂದ ಅಸಭ್ಯ ವರ್ತನೆಯ ಬಗ್ಗೆ ಆರೋಪಿಸಿ ಸಾನಿಯಾ ಅಯ್ಯರ್ ಕಿರಿಕ್ ಮಾಡಿದ್ದರಲ್ಲದೇ ಕಂಬಳ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದರು.

- Advertisement -

Latest News

error: Content is protected !!