Saturday, June 6, 2026
Homeತಾಜಾ ಸುದ್ದಿಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ; ಆರೋಪಿ ಶಂಕಿತ ಉಗ್ರ ಶಾರೀಕ್ ನನ್ನು ವಶಕ್ಕೆ...

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ; ಆರೋಪಿ ಶಂಕಿತ ಉಗ್ರ ಶಾರೀಕ್ ನನ್ನು ವಶಕ್ಕೆ ಪಡೆಯಲಿರುವ ಎನ್ ಐಎ

- Advertisement -
- Advertisement -

ಬೆಂಗಳೂರು ; ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ನನ್ನು ಎನ್ ಐಎ ವಶಕ್ಕೆ ಪಡೆಯಲಿದೆ ಎನ್ನಲಾಗಿದೆ. ಸದ್ಯ ಶಾರೀಕ್ ಆರೋಗ್ಯದಲ್ಲಿ ಸುಧಾರಣೆಯಾಗಿರುವ ಹಿನ್ನೆಲೆ ಆತ ಈ ವಾರ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾನೆ. ಈ ಹಿನ್ನೆಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಆತನನ್ನು ವಶಕ್ಕೆ ಪಡೆಯಲು ರೆಡಿಯಾಗಿದೆ ಎನ್ನಲಾಗಿದೆ.

ಉಗ್ರ ಶಾರೀಕ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೇ. 25 ರಷ್ಟು ಸುಟ್ಟ ಗಾಯಗಳಿಂದ ಗುಣಮುಖನಾಗಿದ್ದು, ಶಾರೀಕ್ ಡಿಸ್ಚಾರ್ಜ್ ಮಾಡಲು ವೈದ್ಯರು ಮುಂದಾಗಿದ್ದಾರೆ. ಶೀಘ್ರವೇ ಡಿಸ್ಚಾರ್ಜ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಬಹುತೇಕ ಸುಟ್ಟ ಗಾಯಗಳು ವಾಸಿಯಾಗಿ ಶಾರೀಕ್ ಆರೋಗ್ಯದಲ್ಲಿ ಸುಧಾರಣೆಯಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಿಂದ ಶಾರೀಕ್ ಡಿಸ್ಚಾರ್ಜ್ ಬಳಿಕ ಎನ್ ಐಎ ತಂಡ ಮತ್ತೆ ಕಸ್ಟಡಿಗೆ ಪಡೆಯಲಿದೆ.ಈಗಾಗಲೇ ಚಿಕಿತ್ಸೆ ಜೊತೆಗೆ ಬಹುತೇಕ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!