Friday, June 5, 2026
Homeತಾಜಾ ಸುದ್ದಿಮಲ್ಲಿಕಾರ್ಜುನ ಖರ್ಗೆಯನ್ನು ಟಾರ್ಗೆಟ್‌ ಮಾಡುವ ಅವಶ್ಯಕತೆ ಮೋದಿಯವರಿಗಿಲ್ಲ: ನಳಿನ್‌

ಮಲ್ಲಿಕಾರ್ಜುನ ಖರ್ಗೆಯನ್ನು ಟಾರ್ಗೆಟ್‌ ಮಾಡುವ ಅವಶ್ಯಕತೆ ಮೋದಿಯವರಿಗಿಲ್ಲ: ನಳಿನ್‌

- Advertisement -
- Advertisement -

ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಲ್ಬುರ್ಗಿಗೆ ಬಂದದ್ದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಲು ಅಲ್ಲ. ಅದರ ಅವಶ್ಯಕತೆಯೂ ಅವರಿಗಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು. ‌

ಪ್ರಧಾನಿಗಳು ಕಲಬುರಗಿಗೆ ಆಗಮಿಸುವ ಮೊದಲು ಅಲ್ಲಿನ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತಾಡಿದ ನಳಿನ್, ಇದು ಚುನಾವಣ ಪ್ರಚಾರ ಕಾರ್ಯಕ್ರಮವಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿರುವ ಸರ್ಕಾರೀ ಕಾರ್ಯಕ್ರಮ ಎಂದು ಹೇಳಿದರು. ಹಿಂದಿನ ಕಾಂಗ್ರೆಸ್ ಸರ್ಕಾರಗಳು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರುತ್ತಿದ್ದಾರೆ ಎಂದು ನಳಿನ್ ಹೇಳಿದರು.

- Advertisement -

Latest News

error: Content is protected !!