- Advertisement -
![]()
- Advertisement -
ಬೆಳ್ತಂಗಡಿ: ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಶಾಸಕ .ಕೆ.ವಸಂತ ಬಂಗೇರರವರ 78 ನೇ ವರ್ಷದ ಜನ್ಮದಿನವನ್ನು ಕೆ.ವಸಂತ ಬಂಗೇರರ ಅಭಿಮಾನಿ ಬಳಗವಾದ ಬಂಗೇರ ಬ್ರಿಗೇಡ್ ಬೆಳ್ತಂಗಡಿ ಅರ್ಥಪೂರ್ಣವಾಗಿ ಆಚರಿಸಿದೆ.



ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ವತಿಯಿಂದ ನಗರದ ಉದಯನಗರ ಅನುಗ್ರಹ ವೃದ್ಧಾಶ್ರಮಕ್ಕೆ ವಸಂತ ಬಂಗೇರರ ಜೊತೆ ಭೇಟಿ ನೀಡಿ, ಆಶ್ರಮವಾಸಿಗಳಿಗೆ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಹಾಗೆಯೇ ಸರ್ಕಾರಿ ಆರೋಗ್ಯ ಕೇಂದ್ರ ಬೆಳ್ತಂಗಡಿ ಇಲ್ಲಿಗೆ ಭೇಟಿ ನೀಡಿ, ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು


ಈ ಸಂದರ್ಭದಲ್ಲಿ ಅನೂಪ್ ಬಂಗೇರ, ಸಲೀಂ ಕುವೆಟ್ಟು, ರವೀಂದ್ರ ಅಮೀನ್, ಸಂದೀಪ್ ಎಸ್ ನೀರಲ್ಕೆ, ಅಶ್ವಥ್ ರಾಜ್, ನಿಸಾರ್, ನಿಝಾಮ್ ಹಾಗೂ ಬಂಗೇರರವರ ಅಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
- Advertisement -


