Friday, June 5, 2026
Homeಕರಾವಳಿಉಡುಪಿಉಡುಪಿ; ಟೈಟ್ ಆಗಿ‌‌‌ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು

ಉಡುಪಿ; ಟೈಟ್ ಆಗಿ‌‌‌ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು

- Advertisement -
- Advertisement -

ಉಡುಪಿ; ಟೈಟ್ ಆಗಿ ಬಸ್ ಚಲಾಯಿಸುತ್ತಿದ್ದ ಬಸ್ ಚಾಲಕನನ್ನು ಬಸ್ ನಿಂದ ಕಳಗೆ ಇಳಿಸಿ ಪ್ರಯಾಣಿಕರು ತರಾಟೆಗೆ ತೆಗದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ ಆನಂದ್ ಟ್ರಾವೆಲ್ಸ್ ಬಸ್ ನಲ್ಲಿ ಸುಮಾರು 30ಕ್ಕೂ ಅಧಿಕ ಪ್ರಯಾಣಿಕರಿದ್ದು, ಬಸ್ ಚಾಲಕ ರಸ್ತೆಯುದ್ದಗಲಕ್ಕೂ ಬಸ್ ಚಲಾಯಿಸುತ್ತಿದ್ದ ಎಂದು ಹೇಳಲಾಗಿದ್ದು, ಇದನ್ನು ಗಮನಿಸಿದ ಪ್ರಯಾಣಿಕರು ಬಸ್ ನ್ನು ನಿಲ್ಲಿಸಿ ಬಸ್ ಚಾಲಕನ ತರಾಟೆ ತೆಗೆದುಕೊಂಡಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಪಾನಮತ್ತರಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಹಿನ್ನಲೆಯಲ್ಲಿ ಬಸ್ ನಿಲ್ಲಿಸಿ ತರಾಟೆ ತೆಗೆದುಕೊಂಡಿದ್ದಾರೆ.

ಆದರೆ ಬಸ್ ಹಾಳಾದ ಹಿನ್ನಲೆಯಲ್ಲಿ ಹೀಗೆ ಬಸ್ ಚಲಾಯಿಸುತ್ತಿರುವುದಾಗಿ ಚಾಲಕ ವಾದ ಮಾಡಿದ್ದು, ಬೇರೆ ವ್ಯವಸ್ಥೆ ಮಾಡುವರೆಗೂ ಸ್ಥಳದಿಂದ ಮುಂದು ಹೋಗುವುದಿಲ್ಲ ಎಂದ ಬಸ್ ಪ್ರಯಾಣಿಕರು ಹಠ ಹಿಡಿದ್ದರು. ಅಲ್ಲದೆ ತಕ್ಷಣ ಹಾಸನ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ನಡುವೆ ಆನಂದ್ ಟ್ರಾವೆಲ್ಸ್ ನವರ ಬೇಜವಾಬ್ದಾರಿ ತನಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನೆ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!