Monday, June 8, 2026
Homeಕರಾವಳಿಕಡಬ:  ಸ್ಕಾರ್ಪಿಯೋ ಮತ್ತು ಸ್ಕೂಟಿ  ನಡುವೆ ಅಪಘಾತ; ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

ಕಡಬ:  ಸ್ಕಾರ್ಪಿಯೋ ಮತ್ತು ಸ್ಕೂಟಿ  ನಡುವೆ ಅಪಘಾತ; ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಕಡಬ: ಸ್ಕಾರ್ಪಿಯೋ ಮತ್ತು ಸ್ಕೂಟಿ  ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡಬದ  ಕಳಾರ ಸಮೀಪ ನಿನ್ನೆ ನಡೆದಿದೆ.

ಕಡಬದ   ಕಳಾರ ನಿವಾಸಿ ಉಮ್ಮರ್ ಎಂಬವರು ಮೃತಪಟ್ಟವರು.  ಉಮ್ಮರ್ ಸ್ಕೂಟಿಯಲ್ಲಿ ಕಡಬ ಕಡೆಯಿಂದ ಬಂದು ಕಳಾರದಲ್ಲಿ ತನ್ನ ಮನೆ ಕಡೆ ಸ್ಕೂಟಿ ತಿರುಗಿಸುತ್ತಿದ್ದಂತೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಉಮ್ಮರ್ ದೂರ ಎಸೆಯಲ್ಪಿಟ್ಟಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.

ಇನ್ನು ಉಮ್ಮರ್ ಮನೆಯ ಪಕ್ಕದಲ್ಲೇ ಅಪಘಾತವಾಗಿದ್ದು, ಪತ್ನಿ ಎದುರೇ ಅವರು ಪ್ರಾಣ ಬಿಟ್ಟಿದ್ದಾರೆ. ಅಪಘಾತವಾದಂತೆ ಪತ್ನಿ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಅವರು ವಿಧಿವಶರಾಗಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!