Friday, June 5, 2026
Homeಕರಾವಳಿಬೆಳ್ತಂಗಡಿ : ಕಲ್ಮಂಜದಲ್ಲಿ ದಾಸ್ತಾನು ಕೊಠಡಿಗೆ ಬೆಂಕಿ ಬಿದ್ದು ಅಪಾರ ನಷ್ಟ

ಬೆಳ್ತಂಗಡಿ : ಕಲ್ಮಂಜದಲ್ಲಿ ದಾಸ್ತಾನು ಕೊಠಡಿಗೆ ಬೆಂಕಿ ಬಿದ್ದು ಅಪಾರ ನಷ್ಟ

- Advertisement -
- Advertisement -

ಬೆಳ್ತಂಗಡಿ : ಕಲ್ಮಂಜ ಗ್ರಾಮದ ಗುತ್ತು ಮನೆ ಬಾಲಚಂದ್ರ ರಾವ್ ಎಂಬವರ ಮನೆಯ ಸ್ಮೋಕ್ ಹೌಸ್ ಕೊಠಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಉಂಟಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ರಬ್ಬರ್ ಸ್ಮೋಕ್ ಹೌಸ್ ಕಡೆಯಿಂದ ದಾಸ್ತಾನು ಕೊಠಡಿಗೆ ಬೆಂಕಿ ಆವರಿಸಿದ್ದು 7,000 ಕ್ಕಿಂತ ಅಧಿಕ ತೆಂಗಿನ ಕಾಯಿ 2 ಕ್ವಿಂಟಲ್ ಗಿಂತ ಹೆಚ್ಚಿನ ರಬ್ಬರ್ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಗೆ ಕೊಟ್ಟಿಗೆಯ ಚಾವಣಿ, ಗೋಡೆಗೂ ಹೆಚ್ಚಿನ ಹಾನಿ ಉಂಟಾಗಿದೆ. ಸುಮಾರು 3 ಲಕ್ಷ ರೂ. ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.


ದಾಸ್ತಾನು ಕೊಠಡಿಯ ಸಮೀಪವೇ ಜಾನುವಾರುಗಳ ಹಟ್ಟಿ ಇದ್ದು ಅಲ್ಲಿಗೂ ಬೆಂಕಿ ಪಸರಿಸುವ ಸಾಧ್ಯತೆ ಇತ್ತು.ಸ್ಥಳೀಯರ ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳದ ತುರ್ತು ಸ್ಪಂದನೆಯಿಂದ ಬೆಂಕಿಯನ್ನು ಹತೋಟಿಗೆ ತಂದ ಕಾರಣ ಜಾನುವಾರು ಹಟ್ಟಿಗೆ ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!