Thursday, June 4, 2026
Homeಕರಾವಳಿಮಂಗಳೂರು:ಮುಲ್ಕಿಯಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ; ಆರೋಪಿ ದಾವೂದ್ ಗೆ ನ್ಯಾಯಾಂಗ...

ಮಂಗಳೂರು:ಮುಲ್ಕಿಯಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ; ಆರೋಪಿ ದಾವೂದ್ ಗೆ ನ್ಯಾಯಾಂಗ ಬಂಧನ

- Advertisement -
- Advertisement -

ಮಂಗಳೂರು: ಮುಲ್ಕಿಯ ಕೆರೆಕಾಡಿನಲ್ಲಿ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಲಾಗಿತ್ತು.ಇದಾದ ಬಳಿಕ ಹಲ್ಲೆ ಸಂತ್ರಸ್ತ ಹಾಗೂ ಆರೋಪಿಯಾಗಿರುವ ದಾವೂದ್ ಮೇಲೆ ಪೋಕ್ಸೋ ಕೇಸ್ ದಾಖಲಾಗಿತ್ತು.ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಾವೂದ್ ಗೆ ಮಂಗಳೂರಿನ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೂಲ್ಕಿ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಂಬಕ್ಕೆ ಕಟ್ಟಿ ಹಾಕಿ ಯುವಕನಿಗೆ ತೀವ್ರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರು ದುಷ್ಕರ್ಮಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.ಕೆರೆಕಾಡು ಕೆಂಚನಕೆರೆ ನಿವಾಸಿಗಳಾದ ದಿವೇಶ್ ದೇವಾಡಿಗ(38),ರಾಜೇಶ್ ಹಾಗೂ ಯೋಗೇಶ್ ಕುಮಾರ್(46) ಬಂಧಿತ ಆರೋಪಿಗಳು. ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

- Advertisement -

Latest News

error: Content is protected !!