Saturday, June 6, 2026
Homeಕರಾವಳಿಉಡುಪಿಮೂಡುಬಿದಿರೆ: ಹೈಕೋರ್ಟ್‌ ವಕೀಲ ಅಬ್ದುಲ್‌ ಫಾರೂಕ್ ಹೃದಯಾಘಾತದಿಂದ ನಿಧನ

ಮೂಡುಬಿದಿರೆ: ಹೈಕೋರ್ಟ್‌ ವಕೀಲ ಅಬ್ದುಲ್‌ ಫಾರೂಕ್ ಹೃದಯಾಘಾತದಿಂದ ನಿಧನ

- Advertisement -
- Advertisement -

ಮೂಡುಬಿದಿರೆ: ಹೈಕೋರ್ಟ್‌ ವಕೀಲ, ಮೂಡುಬಿದಿರೆಯ ಬೆಳುವಾಯಿ ನಿವಾಸಿ ಅಬ್ದುಲ್‌ ಫಾರೂಕ್ (49) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಇವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಅವರ ಕಿರಿಯ ಸಹೋದರರಾಗಿದ್ದಾರೆ.

ಸ್ವಲ್ಪ ಸಮಯ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿದ್ದ ಇವರು ಈಗ ಹೈಕೋರ್ಟ್ ವಕೀಲರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಮೃತದೇಹ ಬೆಳುವಾಯಿಗೆ ತರಲಾಗುತ್ತದೆ. ಮೃತರು ಪತ್ನಿ ಪುತ್ರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!