Saturday, June 6, 2026
Homeತಾಜಾ ಸುದ್ದಿಕಾಂತಾರ ಸಿನಿಮಾ ನೋಡಿ ಟೀಂಗೆ ಅಭಿನಂದಿಸಿದ್ದೆ: ಬ್ಯಾನ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ: ರಶ್ಮಿಕಾ...

ಕಾಂತಾರ ಸಿನಿಮಾ ನೋಡಿ ಟೀಂಗೆ ಅಭಿನಂದಿಸಿದ್ದೆ: ಬ್ಯಾನ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ: ರಶ್ಮಿಕಾ ಮಂದಣ್ಣ

- Advertisement -
- Advertisement -

ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಕೆಲ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಬಿಡುಗಡೆಯಾದ ಎರಡು ದಿನಗಳ ನಂತರ ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ನನ್ನನ್ನು ಕೇಳಿದರು ಮತ್ತು ನಾನು ಆಗ ನೋಡಿರಲಿಲ್ಲ. ಅದಕ್ಕೆ ನಾನು ಪ್ರಾಮಾಣಿಕವಾಗಿ ಉತ್ತರಿಸಿದೆ.

ಆದರೆ, ನಾನು ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿದ್ದೇನೆ. ಅಲ್ಲದೇ ಟೀಂಗೆ ಮೆಸೇಜ್‌ ಮಾಡಿ ಅಭಿನಂದಿಸಿದೆ” ಆ ಕಡೆಯಿಂದಲೂ ನನಗೆ ರಿಪ್ಲೈ ಬಂದಿತ್ತು ಎಂದು ರಶ್ಮಿಕಾ ಹೇಳಿದರು.

ಇದೇ ವೇಳೆ ಬ್ಯಾನ್‌ ವಿಚಾರವಾಗಿಮಾತನಾಡಿದ ಅವರು, ಇಲ್ಲಿ ಏನಾಗಿದೆ ಎನ್ನುವುದು ದೇವರಿಗೆ ಗೊತ್ತು. ನಾನು ಎಲ್ಲಾ ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಮುಂದೆ ಬಂದು ಹೇಳಲು ಸಾಧ್ಯವಿಲ್ಲ. ಬ್ಯಾನ್ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದಿದ್ದಾರೆ.  

- Advertisement -

Latest News

error: Content is protected !!