Friday, June 5, 2026
Homeಕರಾವಳಿಸುಬ್ರಹ್ಮಣ್ಯ: ಜಾಗದ ವಿಚಾರದಲ್ಲಿ ವ್ಯಕ್ತಿಗೆ ಗಂಭೀರ ಹಲ್ಲೆ

ಸುಬ್ರಹ್ಮಣ್ಯ: ಜಾಗದ ವಿಚಾರದಲ್ಲಿ ವ್ಯಕ್ತಿಗೆ ಗಂಭೀರ ಹಲ್ಲೆ

- Advertisement -
- Advertisement -

ಸುಬ್ರಹ್ಮಣ್ಯ: ಜಾಗದ  ವಿಚಾರದಲ್ಲಿ ಜಗಳ‌ ಉಂಟಾಗಿ ವ್ಯಕ್ತಿಯೊಬ್ಬರಿಗೆ ಅಡಿಕೆ ಸಲಾಕೆಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಗುತ್ತಿಗಾರಿನಲ್ಲಿ ನಡೆದಿದೆ.ಗುತ್ತಿಗಾರಿನ ಕಿರಣ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ.

ನ.26ರಂದು   ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಪುರ್ಲುಮಕ್ಕಿ ಮನೆ ಎಂಬಲ್ಲಿ   ಗೋಪಾಲಕೃಷ್ಣ, ಸುಂದರ ಪಿ ಎಂ ಮತ್ತು ಮುರಳಿ ಎಂಬವರ‌ ನಡುವೆ ತಕರಾರಿನ ಬಗ್ಗೆ ಮಾತಿಗೆ ಮಾತಾಗಿ ಗೋಪಾಲಕೃಷ್ಣರವರು ಅಡಿಕೆ ಸಲಾಕೆಯಿಂದ ಕಿರಣ್ ಗೆ  ಹಲ್ಲೆ ಮಾಡಿ ಎಡ ಕೈ ಮುಂಗೈಗೆ ಹೊಡೆದು, ದೂಡಿದ ಹಾಕಿದ ಪರಿಣಾಮ ಬಲ ಕಾಲಿನ ಮಂಡಿಗೆ ತರಚಿದ ಮತ್ತು ಗುದ್ದಿದ ಗಾಯವಾಗಿದ್ದು, ನಂತರ ಸುಂದರ ಪಿ ಎಂ ಮತ್ತು ಮುರಳಿರವರು ಕಿರಣ್ ಅವರಿಗೆ ಕೈಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆ ವೇಳೆ ಕಿರಣ್ ತಂದೆ ವಸಂತ ಪಿ ಎಂ ರವರು ತಡೆಯಲು ಬಂದಾಗ ಅವರಿಗೂ ಹಲ್ಲೆ ಮಾಡಿ ದೂಡಿ ಹಾಕಿದ ಪರಿಣಾಮ ಬಲಕಾಲಿನ ಪಾದಕ್ಕೆ ನೋವಾಗಿದ್ದು, ಅಲ್ಲದೇ ಕಿರಣ್ ಅವರ ಬಾವ ಕಿಶೋರ್ ಕುಮಾರ್ ತಡೆಯಲು ಬಂದಾಗ ಅವರಿಗೂ ಮುಖಕ್ಕೆ ಗುದ್ದಿ ತುಟಿಯ ಮೇಲ್ಭಾಗ ಮತ್ತು ಕೆಳಭಾಗ ರಕ್ತಗಾಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಸುಬ್ರಮಣ್ಯ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!