Thursday, June 4, 2026
Homeತಾಜಾ ಸುದ್ದಿಮನೆ ಕೆಲಸದಾಕೆಯೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗಲೇ ವೃದ್ಧ ಸಾವು

ಮನೆ ಕೆಲಸದಾಕೆಯೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗಲೇ ವೃದ್ಧ ಸಾವು

- Advertisement -
- Advertisement -

ಬೆಂಗಳೂರು; ಮನೆ ಕೆಲಸದಾಕೆಯೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗಲೇ ವೃದ್ಧ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.

ನವೆಂಬರ್ 17 ರಂದು 67 ವರ್ಷದ ಉದ್ಯಮಿಯ ಶವ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಪತ್ತೆಯಾದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿತ್ತು, ತನಿಖೆ ವೇಳೇಯಲ್ಲಿ 67 ವರ್ಷದ ಉದ್ಯಮಿಯು ತನ್ನ 35 ವರ್ಷದ ಮನೆಕೆಲಸದಾಕೆಯೊಂದಿಗೆ ಸಂಬಂಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿದ್ದ ವ್ಯಕ್ತಿ ನವೆಂಬರ್ 16 ರಂದು ತನ್ನ ಮನೆ ಕೆಲಸದಾಕೆಯ ಮನೆಗೆ ಭೇಟಿ ನೀಡಿದ್ದ. ಆ ವೇಳೆ ಆಕೆಯೊಂದಿಗೆ ಏಕಾಂತದಲ್ಲಿದ್ದಾಗ ಹಾಸಿಗೆಯ ಮೇಲೆಯೇ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ವ್ಯಕ್ತಿಯ ಗುರುತನ್ನು ತಿಳಿದ ನಂತರ, ಪೊಲೀಸರು ಅವನ ಫೋನ್ ಕರೆಗಳ ವಿವರಗಳನ್ನು ಪರಿಶೀಲಿಸಿದ್ದಾರೆ. ಆಗ ಸಾವನ್ನಪ್ಪಿರುವ ವ್ಯಕ್ತಿ ತನ್ನ ಮನೆ ಕೆಲಸದಾಕೆಯ ಮನೆಗೆ ಭೇಟಿ ನೀಡಿದ್ದಾನೆ ಎನ್ನಲಾಗಿದೆ. ಇನ್ನು ವೃದ್ಧನ ಶವವನ್ನು ಮನೆಯಿಂದ ಸಾಗಿಸಲು ಆಕೆಯ ಪತಿ ಸಹಾಯ ಮಾಡಿದ್ದನು ಎನ್ನಲಾಗಿದೆ.

- Advertisement -

Latest News

error: Content is protected !!