Saturday, June 13, 2026
Homeಕರಾವಳಿಉಪ್ಪಿನಂಗಡಿ; ರಾತ್ರಿ ಊಟ ಮಾಡಿ ಮಲಗಿದ ಯುವತಿ ಮಧ್ಯರಾತ್ರಿ ನಾಪತ್ತೆ

ಉಪ್ಪಿನಂಗಡಿ; ರಾತ್ರಿ ಊಟ ಮಾಡಿ ಮಲಗಿದ ಯುವತಿ ಮಧ್ಯರಾತ್ರಿ ನಾಪತ್ತೆ

- Advertisement -
- Advertisement -

ಉಪ್ಪಿನಂಗಡಿ;ರಾತ್ರಿ ಊಟ ಮಾಡಿ ಮಲಗಿದ ಯುವತಿ ಮಧ್ಯರಾತ್ರಿ ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದಲ್ಲಿ‌ ನಡೆದಿದೆ.
ತನ್ನ ಎಂಟು ಮಕ್ಕಳ ಪೈಕಿ ಐದು ಮಂದಿ ಹೆಣ್ಣು ಮಕ್ಕಳಾಗಿದ್ದು, ಇವರ ಪೈಕಿ ಕೊನೆಯವಳಾದ ಸಾಹೀದಾ ಶನಿವಾರ ರಾತ್ರಿ ಊಟ ಮಾಡಿ ಮಲಗಿದಾಕೆ ತಡ ರಾತ್ರಿ 1 ಗಂಟೆ ಸುಮಾರಿಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದಾಳೆ. ಈಕೆ ಕಳೆಂಜಿಬೈಲಿನ ಮುದಾಸೀರ್ ಎಂಬಾತನೊಂದಿಗೆ ಮೊಬೈಲ್ ಸಂಪರ್ಕದಲ್ಲಿ ಇದ್ದಳು.  ಆತನೊಂದಿಗೆ ಹೋಗಿರುವ ಸಂಶಯವಿದೆ ಎಂದು ಆಕೆಯ ತಂದೆ ಅಬ್ದುಲ್ ಖಾದ್ರಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಯುವತಿಯು ಎಲ್ಲಿಯಾದರೂ ಪತ್ತೆಯಾದರೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ತಿಳಿಸಿದ್ದಾರೆ.

- Advertisement -

Latest News

error: Content is protected !!