Sunday, June 7, 2026
Homeಕರಾವಳಿಪುತ್ತೂರು: ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಇಬ್ಬರು ಬಾಲಕರು ಬೆಂಗಳೂರಿನ ರೈಲ್ವೆ ‌ನಿಲ್ದಾಣದಲ್ಲಿ ಪತ್ತೆ

ಪುತ್ತೂರು: ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಇಬ್ಬರು ಬಾಲಕರು ಬೆಂಗಳೂರಿನ ರೈಲ್ವೆ ‌ನಿಲ್ದಾಣದಲ್ಲಿ ಪತ್ತೆ

- Advertisement -
- Advertisement -

ಪುತ್ತೂರು: ನ.7ರಂದು ಪುತ್ತೂರಿನ ಹಾಸ್ಟೆಲ್‌ನಿಂದ ನಾಪತ್ತೆಯಾದ ಇಬ್ಬರು ಬಾಲಕರು ಬೆಂಗಳೂರಿನ ರೈಲ್ವೆ ‌ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಬಾಲಕರು ಪುತ್ತೂರು ರೈಲ್ವೇ ನಿಲ್ದಾಣ ಕಡೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಶೋಧ ನಡೆದಿದ್ದು ಕೊನೆಗೂ ಬಾಲಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನ. 10 ರಂದು ಮಕ್ಕಳು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿದ್ದಾರೆ. ಅಲ್ಲಿಂದ ಬೆಂಗಳೂರು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಮಕ್ಕಳನ್ನು ಹಸ್ತಾಂತರಿಸಲಾಗಿದೆ. ಮಕ್ಕಳನ್ನು ವಿಚಾರಿಸಿ ಪೋಷಕರಿಗೆ ಹಸ್ತಾಂತರಿಸುವ ಕಾರ್ಯ ಕೂಡಾ ಪ್ರಗತಿಯಲ್ಲಿದೆ.

- Advertisement -

Latest News

error: Content is protected !!