Tuesday, July 21, 2026
Homeಕರಾವಳಿನಳಿನ್ ಡಾಲರ್ ಎಂಬ ಪದ ಕೇಳಿದ್ರೆ ಬೆಚ್ಚಿ ಬೀಳ್ತಾರೆ: ಕಾಂಗ್ರೆಸ್‌ ವ್ಯಂಗ್ಯ

ನಳಿನ್ ಡಾಲರ್ ಎಂಬ ಪದ ಕೇಳಿದ್ರೆ ಬೆಚ್ಚಿ ಬೀಳ್ತಾರೆ: ಕಾಂಗ್ರೆಸ್‌ ವ್ಯಂಗ್ಯ

- Advertisement -
- Advertisement -

ಅತ್ತ ಮೋದಿ ಬೆಂಗಳೂರಿಗೆ ಆಗಮಿಸಿದ್ದು ಕೆಲ ಮಹತ್ವದ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಇತ್ತ ಕಾಂಗ್ರೆಸ್‌ ಸರಣಿ ಟ್ವೀಟ್‌ ಮೂಲಕ ಬಿಜೆಪಿ ಪಕ್ಷದ ಕಾಲೆಳೆಯುತ್ತಿದೆ. ಇದೀಗ ಸರಣಿ ಟ್ವೀಟ್‌ ಮೂಲಕ ನಳಿನ್‌ ಕುಮಾರ್‌ ಬಗ್ಗೆ ವ್ಯಂಗ್ಯವಾಗಿ ಟ್ವೀಟ್‌ ಮಾಡಿದೆ.

ನಳಿನ್ ಕುಮಾರ್ ಕಟೀಲ್ ಅವರು ಮೋದಿಯ ಮೇಲೆ ಭರವಸೆಯಿಟ್ಟು ಒಂದು ಡಾಲರ್‌ಗೆ 15 ರೂಪಾಯಿಯಾಗುತ್ತದೆ ಅಂತ ಹಿಂದೊಮ್ಮೆ ಹೇಳಿದ್ರು. ಈಗ 83 ರೂಪಾಯಿಯಾಗಿದೆ. ನಿಮ್ಮ ನಳಿನ್ ಅವರೀಗ ಡಾಲರ್ ಎಂಬ ಪದ ಉಚ್ಚರಿಸುತ್ತಲೇ ಇಲ್ಲ. ಆ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಅವರಿಗೆ ಸಾಂತ್ವನ ಹೇಳುವಿರಾ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಅಲ್ಲದೇ ಈ ಹಿಂದಿನ ತಮ್ಮ ಭೇಟಿಗಾಗಿ ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು.  ಕನ್ನಡಿಗರಿಗೆ ಕಿತ್ತು ಹೋದ ರಸ್ತೆ ತೇಪೆಯ ಬಗ್ಗೆ ಸ್ಪಷ್ಟನೆ ಕೊಡುವಿರಾ  ಎಂದು ಸರಣಿ ಟ್ವೀಟ್‌ ಮಾಡಿದೆ.

- Advertisement -

Latest News

error: Content is protected !!