- Advertisement -
- Advertisement -
ಕಾರ್ಕಳ; ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಕಲ್ಯಾ ಗ್ರಾಮದ ಕೇಪುಲ ಎಂಬಲ್ಲಿ ನಡೆದಿದೆ.
ಕಲ್ಯಾ ರವಿ ಪೂಜಾರಿ ಎಂಬವವರ ಮಗಳು ನಿಶಾ (22) ಮೃತ ದುರ್ದೈವಿ. ಈಕೆ ತಲೆನೋವು ಹಾಗೂ ಮೈ ಅಲರ್ಜಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಇವರ ಸಹೋದರ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿಶಾರ ತಾಯಿ ಶಕುಂತಳಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ನಿಶಾ ಕೂಡ ಮಾನಸಿಕವಾಗಿ ನೊಂದು, ಮನೆಯ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -