Wednesday, June 3, 2026
Homeಕರಾವಳಿವಿಟ್ಲ: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕ ಹೃದಯಾಘಾತದಿಂದ ನಿಧನ

ವಿಟ್ಲ: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕ ಹೃದಯಾಘಾತದಿಂದ ನಿಧನ

- Advertisement -
- Advertisement -

ವಿಟ್ಲ: ಮಕ್ಕಳನ್ನು ಎಂದಿನಂತೆ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಾಣಿ ಸಮೀಪ ನಡೆದಿದೆ.

ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ (45) ಮೃತಪಟ್ಟವರು. ಮಕ್ಕಳು ಜೆರಾಕ್ಸ್‌ ಶಾಪ್‌ ಬಳಿ ಆಟೋ ನಿಲ್ಲಿಸಲು ಹೇಳಿದ್ದು, ಶಾಪ್‌ಗೆ ಹೋಗಿ ಬರುವಷ್ಟರಲ್ಲಿ ಆಟೋ ಚಾಲಕ ಕುಸಿದು ಬಿದ್ದಿದ್ರು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತಾದ್ರೂ, ಅದಾಗಲೇ ಜಯಕರ ಪೂಜಾರಿ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!