Sunday, June 7, 2026
Homeತಾಜಾ ಸುದ್ದಿವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಂದು ಮತ್ತೆ ಕಡಿತ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಂದು ಮತ್ತೆ ಕಡಿತ

- Advertisement -
- Advertisement -

ದೀಪಾವಳಿ ನಂತರ LPG ಸಿಲಿಂಡರ್‌ಗಳ ಬೆಲೆಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಮಿತಿಮೀರಿದ ಇಂಧನ ಬೆಲೆಗಳಿಂದ ಗ್ರಾಹಕರು ಬಳಲುತ್ತಿದ್ದಾರೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂದು ಅಂದರೆ ನವೆಂಬರ್ 1 ರಂದು ಮತ್ತೆ ಕಡಿತಗೊಳಿಸಲಾಗಿದೆ.

19-ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ 115.50 ರೂಪಾಯಿ ಕಡಿತಗೊಳಿಸಲಾಗಿದ್ದು, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳ ಬೆಲೆ ಹೇಳಿಕೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ ರೂ 1,885 ರಿಂದ ರೂ 1,744 ಕ್ಕೆ ಇಳಿದಿದೆ. ಏತನ್ಮಧ್ಯೆ, ದೇಶೀಯ ಎಲ್‌ಪಿಜಿ ಬೆಲೆಗಳು 14.2 ಕೆಜಿ ಸಿಲಿಂಡರ್‌ಗೆ 1,053 ರೂ. ಆಗಿದೆ.

ನವೆಂಬರ್ 1, ಮಂಗಳವಾರದಂದು ಇಂಡಿಯನ್ ಆಯಿಲ್ ಹೊಸ LPG ದರಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಇಂಡೇನ್​ನ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಂದಿನಿಂದ ದೆಹಲಿಯಲ್ಲಿ 115.5 ರೂ., ಕೋಲ್ಕತ್ತಾದಲ್ಲಿ 113 ರೂ., ಮುಂಬೈನಲ್ಲಿ 115.5 ರೂ. ಮತ್ತು ಚೆನ್ನೈನಲ್ಲಿ 116.5 ರೂ. ಕಡಿತಗೊಳಿಸಲಾಗಿದೆ.

- Advertisement -

Latest News

error: Content is protected !!