Saturday, July 5, 2025
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದ ಪ್ರಕರಣ : ಸೋಮನಾಥ್ ನಾಯಕ್  ನ್ಯಾಯಾಲಯಕ್ಕೆ ಶರಣು:...

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದ ಪ್ರಕರಣ : ಸೋಮನಾಥ್ ನಾಯಕ್  ನ್ಯಾಯಾಲಯಕ್ಕೆ ಶರಣು: ಮಂಗಳೂರು ಕಾರಾಗೃಹಕ್ಕೆ ಕಳುಹಿಸಿದ ನ್ಯಾಯಾಲಯ

spot_img
- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ , ಧರ್ಮಾಧಿಕಾರಿ, ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಬರವಣಿಗೆ ಮತ್ತು ಹೇಳಿಕೆ ನೀಡಿದ ಪ್ರಕರಣ ಸಂಬಂಧ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಸಜೆ ಹಾಗೂ 4.5 ಲಕ್ಷ ಪರಿಹಾರ ನೀಡಲು ಆದೇಶ ಮಾಡಿದ್ದು, ಸೋಮನಾಥ್ ನಾಯಕ್ ಇಂದು  ವಕೀಲರೊಂದಿಗೆ ಬಂದು 3 ಗಂಟೆಗೆ CJ&JMFC ಬೆಳ್ತಂಗಡಿ ನ್ಯಾಯಾಧೀಶರಾದ ವಿಜಯೇಂದ್ರ  ಮುಂದೆ ಹಾಜರಾದರು.

ಬೆಳ್ತಂಗಡಿ ಕೋರ್ಟ್ ಗೆ ಆಗಮಿಸುವಾಗ ಸುಮಾರು 70 ಕ್ಕೂ ಅಧಿಕ ಬೆಂಬಲಿಗರು ಹಾಗೂ ಬೆಳ್ತಂಗಡಿ ಕಾಂಗ್ರೆಸ್ ಮಾಜಿ ಶಾಸಕರಾದ ಕೆ.ವಸಂತ ಬಂಗೇರ , ಚಿಂತಕರಾದ ಲಕ್ಷ್ಮೀಶ ತೋಳ್ಪಡಿತ್ತಾಯ, ರಂಜನ್ ರಾವ್ ಯರ್ಡೂರು, ಡಿಎಸ್ಎಸ್ ಮುಖಂಡರು ಹಾಗೂ ಮತ್ತಿತರ ಸಂಘಟನೆಯ ಕಾರ್ಯಕರ್ತರು ಜೊತೆಯಲ್ಲಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಅಥವಾ ಸಂಸ್ಥೆಯ ಕುರಿತು ಗೌರವಕ್ಕೆ ಚ್ಯುತಿ ತರುವಂತ ಯಾವುದೇ ರೀತಿಯಲ್ಲಿ ಬರವಣಿಗೆ ಅಥವಾ ಹೇಳಿಕೆ ನೀಡಬಾರದೆಂದು ಬೆಳ್ತಂಗಡಿ ನ್ಯಾಯಾಲಯ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸೋಮನಾಥ್ ನಾಯಕ್ ಸೇರಿದಂತೆ ಐದು ಜನರಿಗೆ ಆದೇಶ ಮಾಡಿತ್ತು ಆದ್ರೆ ಅದನ್ನು ಮೀರಿ ಮತ್ತೆ ಸೋಮನಾಥ್ ನಾಯಕ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿರುವುದಕ್ಕಾಗಿ ಬೆಳ್ತಂಗಡಿ ನ್ಯಾಯಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಸೋಮನಾಥ್ ನಾಯಕ್ ದೋಷಿ ಎಂದು ಪರಿಗಣಿಸಿ ಮೂರು ತಿಂಗಳ ಸಜೆ ಮತ್ತು 4.5 ಲಕ್ಷ ಪರಿಹಾರ ನೀಡಬೇಕೆಂದು ಆದೇಶ ಮಾಡಿತ್ತು ಅದಲ್ಲದೆ ಸೋಮನಾಥ್ ನಾಯಕ್ ಸೇರಿದ ಆಸ್ತಿ ಸಹ ಮುಟ್ಟುಗೋಲು ಹಾಕಿಕೊಂಡಿತು.

ಬೆಳ್ತಂಗಡಿ ನ್ಯಾಯಲಯದ ಆದೇಶ ವಿರುದ್ಧ ಸೋಮನಾಥ್ ನಾಯಕ್ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯಲ್ಲಿ , ಹೈಕೋರ್ಟ್  , ಸುಪ್ರೀಂ ಕೋರ್ಟ್ ಗಳಲ್ಲಿ ವಕೀಲರ ಮೂಲಕ ಅಪೀಲು ಸಲ್ಲಿಸಿದ್ದರು. ಆದ್ರೆ ಎಲ್ಲಾ ನ್ಯಾಯಾಲಯದಲ್ಲಿ ಅಪೀಲನ್ನು ವಜಾ ಮಾಡಿ ಬೆಳ್ತಂಗಡಿ ನ್ಯಾಯಾಲಯದ ಮೊದಲು ನೀಡಿದ್ದ ಅದೇಶವನ್ನು ಎತ್ತಿಹಿಡಿದಿತ್ತು.

ಬೆಳ್ತಂಗಡಿ ಕೋರ್ಟ್ ನಿಂದ ಸೋಮನಾಥ್ ನಾಯಕ್ ಅವರನ್ನು ಬೆಳ್ತಂಗಡಿ ಪೊಲೀಸರು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುದರು.

- Advertisement -
spot_img

Latest News

error: Content is protected !!