Sunday, June 7, 2026
Homeತಾಜಾ ಸುದ್ದಿಖಾಸಗಿ ವಿಮಾನದಲ್ಲಿ ರಿಷಬ್‌ ಪ್ರಯಾಣ: ಬಡವರ ಮಕ್ಕಳು ಬೆಳೀಬೇಕು ಹೆಸರಿನಲ್ಲಿ ಟ್ರೋಲ್‌

ಖಾಸಗಿ ವಿಮಾನದಲ್ಲಿ ರಿಷಬ್‌ ಪ್ರಯಾಣ: ಬಡವರ ಮಕ್ಕಳು ಬೆಳೀಬೇಕು ಹೆಸರಿನಲ್ಲಿ ಟ್ರೋಲ್‌

- Advertisement -
- Advertisement -

ರಿಷಬ್ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ‘ಬಡವ್ರ ಮಕ್ಕಳು ಬೆಳಿಬೇಕು’ ಹೆಸರಿನಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ. ಸಾಕಷ್ಟು ಜನರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕಾಂತಾರ ಸಿನಿಮಾ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ. ರಿಷಬ್ ಶೆಟ್ಟಿ ಭಾರತದಾದ್ಯಂತ ಸುತ್ತುವಂತಾಗಿದೆ. ಎಲ್ಲ ಕಡೆ ಪ್ರಯಾಣ ಮಾಡಲು ಅವರಲ್ಲಿ ವೇಳೆಯಿಲ್ಲ. ಹಾಗಾಗಿ ಹೊಂಬಾಳೆ ಫಿಲ್ಮ್ಸ್ ನವರು ಬಾಡಿಗೆ ಖಾಸಗಿ ವಿಮಾನ ಬುಕ್ ಮಾಡಿ, ರಿಷಬ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಯಶ್ ಅವರಿಗೂ ಹಾಗೆಯೇ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಹಾಗಾಗಿ ಇದು ರಿಷಬ್ ಖರೀದಿಸಿದ ವಿಮಾನವಲ್ಲ ಎನ್ನುವುದು ಸ್ಪಷ್ಟನೆ ವಿಚಾರ.

- Advertisement -

Latest News

error: Content is protected !!