Friday, June 5, 2026
Homeಕರಾವಳಿಉಪ್ಪಿನಂಗಡಿ; ಆರೋಪಿಯನ್ನು ಕರೆ ತರುವಾಗ ಕಳಚಿದ ಜೀಪಿನ ಟಯರ್

ಉಪ್ಪಿನಂಗಡಿ; ಆರೋಪಿಯನ್ನು ಕರೆ ತರುವಾಗ ಕಳಚಿದ ಜೀಪಿನ ಟಯರ್

- Advertisement -
- Advertisement -

ಉಪ್ಪಿನಂಗಡಿ; ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣದ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆ ತರುವ ವೇಳೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಜೀಪಿನ ಚಕ್ರ ಕಳಚಿದ ಘಟನೆ ಶುಕ್ರವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.

ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿಯ  ಉದನೆ ಎಂಬಲ್ಲಿ ವ್ಯಕ್ತಿಯೋರ್ವ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಈ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು, ಆರೋಪಿಯನ್ನು ಮದ್ಯ ಸಹಿತ ಪೊಲೀಸ್ ಜೀಪಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿ ಠಾಣೆಗೆ ಕರೆ ತರುತ್ತಿದ್ದರು. ಈ ವೇಳೆ ಪೊಲೀಸ್‌ ಠಾಣೆ ಸಮೀಪಿಸುವ ವೇಳೆ ಜೀಪಿನ ಮುಂಭಾಗದ ಚಕ್ರ ಜೀಪಿನಿಂದ ಕಳಚಲ್ಪಟ್ಟು ಅಪಾಯಕ್ಕೆ ಸಿಲುಕಿತ್ತು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!