- Advertisement -
![]()
- Advertisement -
ಮುಂಬೈ: ನಗರದ ಕ್ರೌಫೋರ್ಡ್ (Crawford) ಮಾರುಕಟ್ಟೆಯಲ್ಲಿ ಇಂದು ಸಂಜೆ ಭಾರೀ ಅಗ್ನಿ ಅವಘಡ ನಡೆದಿದೆ. ಜನಸಂದಣಿ ಹೆಚ್ಚಾಗಿದ್ದ ಈ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಸಮಯ ಗಾಬರಿಯ ವಾತಾವರಣ ನಿರ್ಮಾಣವಾಗಿತ್ತು.
ಇಂದು ಸಂಜೆ 6.15ಕ್ಕೆ ಮಾರ್ಕೆಟ್ನಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ 8 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ಆರಿಸುವ ಕೆಲಸ ಶುರುಮಾಡಿವೆ. ಈ ದುರಂತದಲ್ಲಿ ಯಾರೂ ಸಾವನ್ನಪ್ಪಿಲ್ಲ. ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ
ಈ ಘಟನೆ ನಡೆದ ಕೂಡಲೆ ಎಲ್ಲರೂ ಹೊರಗೆ ಓಡಿಬಂದ ಕಾರಣ ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
- Advertisement -


