- Advertisement -
- Advertisement -
ಮಂಗಳೂರು: ಆಟವಾಡುತ್ತಿದ್ದ ವೇಳೆ ಗೇಟಿನೊಂದಿಗೆ ಕಾಂಪೌಂಡ್ ಕುಸಿದಿದ್ದರಿಂದ 3 ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಮಂಗಳೂರಿನ ಮುನ್ನೂರು ಗ್ರಾಮದ ಸಂತೋಷನಗರ ಮಸೀದಿ ಸಮೀಪ ಸಂಭವಿಸಿದೆ.
ಅಶ್ರಫ್ ಮತ್ತು ಆಯೇಷಾ ದಂಪತಿ ಪುತ್ರ ಐಮಾನ್(3) ಮೃತಪಟ್ಟ ಮಗು ಮೃತ ದುರ್ದೈವಿ.
ಐಮಾನ್ ಗೇಟ್ ಬಳಿ ಆಟವಾಡುತ್ತಿದ್ದಾಗ ಇದಕ್ಕಿದ್ದಂತೆ ಕೌಂಪೌಂಡ್ ಗೋಡೆ ಕುಸಿದಿದ್ದು ತಡೆಗೋಡೆಯ ಅಡಿಗೆ ಮಗು ಸಿಲುಕಿ ಮೃತಪಟ್ಟಿದೆ. ಮಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದರಿಂದ ಕಾಂಪೌಂಡ್ ದುರ್ಬಲಗೊಂಡಿತ್ತು ಎನ್ನಲಾಗಿದೆ.
ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -