Sunday, May 5, 2024
Homeತಾಜಾ ಸುದ್ದಿಕಳಸ: ಜೀಪ್ ಡಿಕ್ಕಿ ಹೊಡೆದು 9 ವರ್ಷದ ಬಾಲಕಿ ಸಾವು

ಕಳಸ: ಜೀಪ್ ಡಿಕ್ಕಿ ಹೊಡೆದು 9 ವರ್ಷದ ಬಾಲಕಿ ಸಾವು

spot_img
- Advertisement -
- Advertisement -

ಕಳಸ: ಮಸೀದಿಯಿಂದ ಪಾಠ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕಿಗೆ ವೇಗವಾಗಿ ಬರುತ್ತಿದ್ದ ಜೀಪ್ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಳಸ ಪಟ್ಟಣ ಸಮೀಪ ಕೋಟೆ ಹೊಳೆ ಎಂಬಲ್ಲಿ ನಡೆದಿದೆ.

ಮೃತ ಬಾಲಕಿಗೆ ೯ವರ್ಷ ವಯಸ್ಸಾಗಿದ್ದು, ವಜೀರ್ ಅಹಮದ್ ಎಂಬವರ ಮಗಳು ಎಂದು ತಿಳಿದುಬಂದಿದೆ.

ಮಸೀದಿಯಿoದ ಮನೆಗೆ ಬರುತ್ತಿದ್ದ ಮೂವರು ಬಾಲಕಿಯರ ಪೈಕಿ ಒಬ್ಬಳಿಗೆ ಜೀಪ್ ಹಿಂಭಾಗಕ್ಕೆ ಬಲವಾಗಿ ಬಂದು ಗುದ್ದಿದ ಪರಿಣಾಮ ಆ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.


ಅಪಘಾತವೆಸಗಿದ ಜೀಪ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -
spot_img

Latest News

error: Content is protected !!