Saturday, May 18, 2024
Homeಕರಾವಳಿಮಲ್ಪೆ: ಬಲೆಗೆ ಬಿದ್ದ 84 ಕಿಲೋ ಗಾತ್ರದ ಹೆಲಿಕ್ಯಾಪ್ಟರ್ ಫಿಶ್!

ಮಲ್ಪೆ: ಬಲೆಗೆ ಬಿದ್ದ 84 ಕಿಲೋ ಗಾತ್ರದ ಹೆಲಿಕ್ಯಾಪ್ಟರ್ ಫಿಶ್!

spot_img
- Advertisement -
- Advertisement -

ಮಲ್ಪೆ: ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನಲ್ಲಿ ಅಪರೂಪದ ಹೆಲಿಕಾಪ್ಟರ್ ಮೀನು ದೊರೆತಿದೆ.

ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗೆ ಈ ಮೀನು ಬಿದ್ದಿದ್ದು, ಭಾರೀ ಗಾತ್ರ ಉದ್ದ ಬಾಲ, ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆಯಿರುವ ಮೀನು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದೆ.

ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರಿಗಾತ್ರದ ಈ ಮೀನು ಬಿದ್ದಿದೆ. ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದೆ. ಹೆಲಿಕಾಪ್ಟರ್ ಫಿಶ್ ಎಂಬ ಅಡ್ಡ ಹೆಸರು ಕೂಡ ಇದೆ.

ಭಾರೀ ಗಾತ್ರದ ಮೀನು 84 ಕಿಲೋ ತೂಗುತ್ತಿತ್ತು. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ ನ ಮಾಂಸ ಇಷ್ಟ ಇಲ್ಲ. ಇಲ್ಲಿನವರಿಗೆ ಅದರ ರುಚಿ ಹಿಡಿಸೋದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್ ನ ಮಾಂಸವನ್ನು ಖರೀದಿ ಮಾಡುತ್ತಾರೆ. ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ನೆಮ್ಮಿನನ್ನು ರವಾನೆ ಮಾಡಲಾಯಿತು.

- Advertisement -
spot_img

Latest News

error: Content is protected !!