Sunday, June 7, 2026
Homeಕರಾವಳಿಕೇರಳದಲ್ಲಿ ಈಜುಗಾರಿಕೆಯಲ್ಲಿ ದಾಖಲೆ ನಿರ್ಮಿಸಿದ 70 ವರ್ಷದ ವೃದ್ಧೆ ; ಎರಡೂ ಕೈಗಳನ್ನು ಕಟ್ಟಿ ಪೆರಿಯಾರ್...

ಕೇರಳದಲ್ಲಿ ಈಜುಗಾರಿಕೆಯಲ್ಲಿ ದಾಖಲೆ ನಿರ್ಮಿಸಿದ 70 ವರ್ಷದ ವೃದ್ಧೆ ; ಎರಡೂ ಕೈಗಳನ್ನು ಕಟ್ಟಿ ಪೆರಿಯಾರ್ ನದಿಯಲ್ಲಿ  ಈಜಿದ ಆರಿಫಾ

- Advertisement -
- Advertisement -

ಕೇರಳ; ಇಲ್ಲಿನ 70 ವರ್ಷದ ವೃದ್ಧೆಯೊಬ್ಬರು ತನ್ನ ಎರಡೂ ಕೈಗಳನ್ನು ಕಟ್ಟಿ ಪೆರಿಯಾರ್‌ ನದಿಯಲ್ಲಿ ಈಜಿ ಇತಿಹಾಸ ನಿರ್ಮಿಸಿದ್ದಾರೆ.

ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಆಯೋಜಿಸಿದ್ದ ಈಜು ಕಾರ್ಯಕ್ರಮದಲ್ಲಿ 70 ವರ್ಷದ ಮಹಿಳೆ ಅಲುವಾದ ತೆಕ್ಕಟ್ಟುಕರದ ಆರಿಫಾ ಸುಮಾರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ಕೈಗಳನ್ನು ಕಟ್ಟಿಕೊಂಡು ಈಜಿದ್ದಾರೆ.

ಆರಿಫಾ ವಿ ಕೆ , ಕುನ್ನುಂಪುರಂನ ಬಾಲಕ ಭರತ್ ಕೃಷ್ಣ ಮತ್ತು ಅಶೋಕಪುರಂನ 38 ವರ್ಷದ ಧನ್ಯ ಕೆ ಜಿ ಅವರೊಂದಿಗೆ ಮಡಪಂ ಕಡವುನಿಂದ ಮಣಪ್ಪುರಂ ದೇಸೊಮ್ ಕಡವುವರೆಗೆ ಈಜಿದ್ದಾರೆ.

ಈ ಬಗ್ಗೆ ಮಾತನಾಡಿದ ಆರಿಫಾ, ನನ್ನ ಕುಟುಂಬದ ಒಂಬತ್ತು ಮಂದಿಗೆ ಈಜು ಗೊತ್ತು. ಈ ವರ್ಷದ ಆರಂಭದಲ್ಲಿ, ನಾನು ಪೆರಿಯಾರ್ ನದಿಯಲ್ಲಿ ಈಜುತ್ತಿದ್ದೆ. ನನ್ನ ತರಬೇತುದಾರ ಸಾಜಿ ವಳಸ್ಸೆರಿ ಅವರು ಕೈಗಳನ್ನು ಕಟ್ಟಿಕೊಂಡು ಈಜಲು ಪ್ರಯತ್ನಿಸಲು ನನಗೆ ಆತ್ಮವಿಶ್ವಾಸವನ್ನು ತುಂಬಿದರು. ಈಗ ನಾನು ಯಶಸ್ವಿಯಾಗಿದ್ದೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!