Saturday, June 6, 2026
Homeತಾಜಾ ಸುದ್ದಿಒಂದನೇ ತರಗತಿಗೆ ಸೇರಲು 6 ವರ್ಷ ಭರ್ತಿ ಕಡ್ಡಾಯ: ರಾಜ್ಯ ಸರ್ಕಾರದಿಂದ ವಯಸ್ಸಿನ ಮಿತಿ ನಿಗದಿ

ಒಂದನೇ ತರಗತಿಗೆ ಸೇರಲು 6 ವರ್ಷ ಭರ್ತಿ ಕಡ್ಡಾಯ: ರಾಜ್ಯ ಸರ್ಕಾರದಿಂದ ವಯಸ್ಸಿನ ಮಿತಿ ನಿಗದಿ

- Advertisement -
- Advertisement -

ಬೆಂಗಳೂರು: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ವಯಸ್ಸಿನ ಮಿತಿಯನ್ನು ರಾಜ್ಯ ಸರ್ಕಾರ ಮರು ಪರಿಷ್ಕರಿಸಿದೆ.

ಶೈಕ್ಷಣಿಕ ವರ್ಷದ ಜೂನ್ ಒಂದರಂದು ಮಗುವಿಗೆ ಕಡ್ಡಾಯವಾಗಿ ಆರು ವರ್ಷ ತುಂಬಿರಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

2020ರ ಆದೇಶದ ಪ್ರಕಾರ ಎಲ್ ಕೆಜಿಗೆ 3 ವರ್ಷ 5 ತಿಂಗಳು ಮತ್ತು ಒಂದನೇ ತರಗತಿಗೆ 5 ವರ್ಷ 5 ತಿಂಗಳು ವಯಸ್ಸಿನ ಮಿತಿ ನಿಗದಿಪಡಿಸಲಾಗಿತ್ತು.

ಇಂದು ಹಳೆಯ ಆದೇಶ ವಾಪಸ್ ಪಡೆದು 6 ವರ್ಷ ವಯಸ್ಸಿನ ಮಿತಿ ನಿಗದಿಪಡಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ.

- Advertisement -

Latest News

error: Content is protected !!