Sunday, May 19, 2024
Homeಇತರಹೈದರಾಬಾದ್ ನಲ್ಲಿ 6 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ...! ರೈಲ್ವೆ ಹಳಿ ಮೇಲೆ...

ಹೈದರಾಬಾದ್ ನಲ್ಲಿ 6 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ…! ರೈಲ್ವೆ ಹಳಿ ಮೇಲೆ ಆರೋಪಿ ಶವ ಪತ್ತೆ…!

spot_img
- Advertisement -
- Advertisement -

ಹೈದರಾಬಾದ್ : ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯ ಶವ ಇಂದು ತೆಲಂಗಾಣದ ಸ್ಟೇಷನ್ ಘನಪುರದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್‌ 9 ರ ಗುರುವಾರದಂದು ಹೈದರಾಬಾದ್‌ನ ಸೈದಾಬಾದ್‌ನಲ್ಲಿ 6 ವರ್ಷದ ಬಾಲಕಿಯನ್ನು ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಕೊಂದು ಪರಾರಿಯಾಗಿದ್ದ ಘಟನೆ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಆರೋಪಿಯ ಶವ ತೆಲಂಗಾಣದ ಸ್ಟೇಷನ್ ಘನಪುರದಲ್ಲಿ ಪತ್ತೆಯಾಗಿದೆ.

ಅತ್ಯಾಚಾರಿ ಆರೋಪಿಯನ್ನು ಎನ್​ಕೌಂಟರ್​ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ನಡುವೆ ಆತನ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಆದರೆ, ಅತ್ಯಾಚಾರ ಆರೋಪಿ ಇಂದು ತೆಲಂಗಾಣದ ಸ್ಟೇಷನ್ ಘನಪುರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.

- Advertisement -
spot_img

Latest News

error: Content is protected !!