ಬೆಂಗಳೂರು: ಬೆಂಗಳೂರಿನಲ್ಲಿ ಇಂದು 142 ಕೊರೊನಾ ಪಾಸಿಟಿವ್ ಸಂಖ್ಯೆ ವರದಿಯಾಗಿದ್ದು, ರಾಜ್ಯದಲ್ಲಿ ಇಂದು ಒಟ್ಟು 153 ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಬೆಂಗಳೂರನ್ನು ಹೊರತು ಪಡಿಸಿ ದಕ್ಷಿಣ ಕನ್ನಡದಲ್ಲಿ ದಾಖಲಾಗಿರುವ 6 ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹೆಚ್ಚಿನ ಕೊರೊನಾ ಕೇಸ್ ಆಗಿದ್ದು, ನಿನ್ನೆ ಕೂಡಾ ದಕ್ಷಿಣ ಕನ್ನಡದಲ್ಲಿ 6 ಪ್ರಕರಣ ದಾಖಲಾಗಿತ್ತು. ಉಳಿದಂತೆ 24 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.
ಯಾವುದೇ ಮರಣ ಪ್ರಕರಣ ದಾಖಲಾಗದೇ ಇಂದು 175 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಮಾರ್ಜ್ ಆಗಿರುತ್ತಾರೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 0.72 ದಾಖಲಾಗಿದ್ದು, ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,777ಕ್ಕೆ ತಲುಪಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,064 ಮರಣ ಪುಕರಣ ಪತ್ತೆಯಾಗಿದೆ. ಕೆಲದಿನಗಳಿಂದ ಮರಣ ಪ್ರಕರಣ ಸ್ಥಿರವಾಗಿದ್ದು, ಇಂದು ಕೂಡ ಸ್ಥಿರತೆಯನ್ನು ಕಾಯ್ದುಕೊಂಡಿದೆ.
ಈವರೆಗೆ ರಾಜ್ಯದಲ್ಲಿ ಒಟ್ಟು 39,51,131 ಮಂದಿಗೆ ಕೊರೊನಾ ಬಂದಿದ್ದು, ಒಟ್ಟು 39,09,248 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 63,840 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 21,068 ಸ್ಯಾಂಪಲ್ ಗಳನ್ನು ಕೊರೂನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆ ನೀಡಿರುವ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 142, ದಕ್ಷಿಣ ಕನ್ನಡ 6, ಶಿವಮೊಗ್ಗ 2, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮತ್ತು ಉಡುಪಿಯಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 153 ಪುಕರಣ ವರದಿಯಾಗಿದೆ.