Friday, June 5, 2026
Homeಪ್ರಮುಖ-ಸುದ್ದಿಟಿಕ್ ಟಾಕ್ ಸೇರಿದಂತೆ 59 ಚೈನೀಸ್ ಆ್ಯಪ್ ಗಳು ಬ್ಯಾನ್

ಟಿಕ್ ಟಾಕ್ ಸೇರಿದಂತೆ 59 ಚೈನೀಸ್ ಆ್ಯಪ್ ಗಳು ಬ್ಯಾನ್

- Advertisement -
- Advertisement -

ನವದೆಹಲಿ  : ಗಲ್ವಾನ್ ಕಣಿವೆಯಲ್ಲಿ ಭಾರತದ 20 ಸೈನಿಕರನ್ನು ಚೀನಾ ಬಲಿ ಪಡೆದ ಬಳಿಕ ದೇಶದಾದ್ಯಂತ ಚೀನಿ ಉತ್ಪನ್ನಗಳ ಬಹಿಷ್ಕಾರಕ್ಕೆ ಭಾರೀ ಕೂಗು ಕೇಳಿ ಬಂದಿತ್ತು.  ಅದರಂತೆಯೇ ಚೀನಾದ ಮೊಬೈಲ್ ಆ್ಯಪ್ ಗಳ ಬಹಿಷ್ಕಾರಕ್ಕೂ ಕೋಟ್ಯಂತರ ಜನ ಧ್ವನಿ ಎತ್ತಿದ್ದರು. ಇದೀಗ ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಭಾರತ ಸರ್ಕಾರ 59 ಚೀನಾದ ಆ್ಯಪ್ ಗಳನ್ನು ಬ್ಯಾನ್ ಮಾಡಿ ಆದೇಶ  ಹೊರಡಿಸಿದೆ. ಆದರಂತೆ ಟಿಕ್ ಟಾಕ್ ಸೇರಿದಂತೆ 59 ಚೀನಿ ಆ್ಯಪ್ ಗಳು ನಾಳೆಯಿಂದಲೇ ಬ್ಯಾನ್ ಆಗಲಿವೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಇನ್ನು ಟಿಕ್ ಟಾಕ್ ಆ್ಯಪ್ ಬ್ಯಾನ್ ಆಗ್ಬೇಕು ಅಂತಾ ಬಹು ದಿನಗಳಿಂದ ಕೂಗು ಜೋರಾಗಿತ್ತು. ಇದೀಗ ಇದೇ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಆ ಮೂಲಕ ಚೀನಾಗೆ ಮುಟ್ಟಿ ನೋಡಿಕೊಳ್ಳುವಂತಹ ಏಟು ಕೊಟ್ಟಿದೆ.

- Advertisement -

Latest News

error: Content is protected !!